ಸೌದಿ ಅರೇಬಿಯದಲ್ಲಿ ಇಕಾಮಾ ಕಳೆದುಕೊಂಡರೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ

Update: 2018-05-10 09:41 GMT

ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ವಿದೇಶಿಗರಿಗೆ ಇಕಾಮಾ (ವಸತಿ ಪರವಾನಿಗೆ) ಅಗತ್ಯ ಬೇಕಾದ ದಾಖಲೆ. ಕೆಲವೊಂದು ಸಂದರ್ಭಗಳಲ್ಲಿ ಇಕಾಮಾವನ್ನು ಕಳೆದುಕೊಂಡ ವಿದೇಶಿಗರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಈ ಕೆಳಗಿವೆ.

1. ನಿಮ್ಮ ಇಕಾಮಾ ಕಳೆದುಹೋದದ್ದು ಖಚಿತವಾದ ಕೂಡಲೇ ನಿಮ್ಮ ಪ್ರಾಯೋಜಕರಿಗೆ ಈ ಬಗ್ಗೆ ವರದಿ ಮಾಡಬೇಕು.

2. ಅರೆಬಿಕ್ ನಲ್ಲಿ ಲಿಖಿತ ಟಿಪ್ಪಣಿಯನ್ನು ಮಾಡಿ, ನೀವು ಇಕಾಮಾವನ್ನು ಹೇಗೆ ಕಳೆದುಕೊಂಡಿದ್ದೀರಿ ಎಂಬುವುದನ್ನು ಬರೆದು ನಂತರ ನಿಮ್ಮ ಕಂಪೆನಿಯ ವ್ಯಕ್ತಿಯ ಸಹಾಯದಿಂದ ಪೊಲೀಸ್ ಗೆ ವರದಿ ಮಾಡಿ,

3. ನಿಮ್ಮ ಪ್ರಾಯೋಜಕ ಕಫೀಲ್ ಅರೆಬಿಕ್ ಲಿಖಿತ ಟಿಪ್ಪಣಿಯನ್ನು ನಿಮ್ಮ ಕಂಪೆನಿಯ ಲೋಗೋ ಲೆಟರ್ ಹೆಡ್ ನಲ್ಲಿ ಚೇಂಬರ್ ಆಫ್ ಕಾಮರ್ಸ್ ನಿಂದ ಸಹಿ ಮಾಡಬೇಕಾಗುತ್ತದೆ ಮತ್ತು ನೀವು ಹೇಗೆ ಕಳೆದುಕೊಂಡಿರುವಿರಿ ಎಂಬುವುದನ್ನು ವಿವರಿಸಬೇಕು

4. ನಿಮ್ಮ ಇಕಾಮ ಅವಧಿಯು ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆಯಿದ್ದರೆ, ನಂತರ ನೀವು ಒಂದು ವರ್ಷದ ಇಕಾಮ ಶುಲ್ಕ 650 ರಿಯಾಲನ್ನು ಪಾವತಿಸಬೇಕು.

5. ನಿಮ್ಮ ಪ್ರಾಯೋಜಕರ ನಿರ್ದಿಷ್ಟ ವ್ಯಕ್ತಿ ಝವಾಜತ್ ಗೆ ಲೆಟರ್ ಪ್ಯಾಡ್ ಅರೆಬಿಕ್ ಲಿಖಿತ ಸೂಚನೆ, ಎರಡು ಛಾಯಾಚಿತ್ರಗಳು, ಕಳೆದುಹೋದ ಇಕಾಮಾದ ನಕಲು, ಪಾಸ್ಪೋರ್ಟ್ ನ ನಕಲು ಪ್ರತಿ, ಫೈನ್ ಪಾವತಿ ಪುರಾವೆ (ರಿಯಾಲ್ 1000 / -) ಮತ್ತು ಶುಲ್ಕ (ರಿಯಾಲ್ 650 / -) ಮತ್ತು ಜವಾಝತ್ ತುಂಬಿದ ಫಾರ್ಮ್ ಸಲ್ಲಿಸಬೇಕು.

ಈ ಎಲ್ಲಾ ಕೆಲಸಗಳು ಸರಿಯಾಗಿ ನಡೆದಲ್ಲಿ ಒಂದೇ ದಿನದಲ್ಲಿ ಇಕಾಮ ನಿಮ್ಮ ಕೈಸೇರಬಹುದು.

►ಮೊದಲ ಬಾರಿಗೆ ಇಕಾಮಾ ಕಳೆದುಕೊಂಡರೆ 1,000 ರಿಯಾಲ್, ಎರಡನೆ ಬಾರಿಗೆ 2,000 ರಿಯಾಲ್ ಮತ್ತು ಮೂರನೇ ಬಾರಿಗೆ 3000 ರಿಯಾಲ್ ಶುಲ್ಕ ಪಾವತಿಸಬೇಕಾಗುತ್ತದೆ.

►ಇಕಾಮಾ ಕಳೆದುಕೊಂಡ 24 ಗಂಟೆಗಳ ಒಳಗೆ ದಂಡವನ್ನು ತಪ್ಪಿಸಲು ಅದನ್ನು ಸಂಬಂಧಪಟ್ಟವರಿಗೆ ವರದಿ ಮಾಡಬೇಕು.

Writer - ನೂರುದ್ದೀನ್ ಆವಿನಹಳ್ಳಿ

contributor

Editor - ನೂರುದ್ದೀನ್ ಆವಿನಹಳ್ಳಿ

contributor

Similar News