ವುಮನ್ ಅಚೀವರ್ಸ್ ಅವಾರ್ಡ್‌ಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 10: ಇವೆಂಟ್ ಆರ್ಟ್ ಸಂಸ್ಥೆಯಿಂದ ಮಹಿಳಾ ಸಾಧಕಿಯರನ್ನು ಗುರುತಿಸುವ ಸಲುವಾಗಿ ಕರ್ನಾಟಕ ವುಮನ್ ಅಚೀವರ್ಸ್ ಅವಾರ್ಡ್-2018 ನೀಡಲು ಮುಂದಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ಸ್ಪೂರ್ತಿ ವಿಶ್ವಾಸ್, ನಮ್ಮ ನಡುವೆ ಬಹಳಷ್ಟು ಸಾಧಕಿಯರಿದ್ದಾರೆ. ಆದರೆ, ಅವರು ತಮ್ಮನ್ನು ಹೊರಪ್ರಪಂಚಕ್ಕೆ ಗುರುತಿಸಿಕೊಂಡಿ ರುವುದಿಲ್ಲ. ಅಂತಹ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಾಜ ಸೇವೆ, ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ, ದಿವ್ಯಾಂಗ ಮಹಿಳೆಯರು, ಹಿರಿಯ ಮಹಿಳಾ, ಒಬ್ಬ ಉತ್ತಮ ತಾಯಿಯಾಗಿ ಮಹಿಳೆ ಸಾಧನೆಯ ಮೆಟ್ಟಿಲೇರಿರುತ್ತಾಳೆ. ಅಂತಹ ಮಹಿಳೆಯನ್ನು ಗುರುತಿಸುವ ಹೆಮ್ಮೆಯ ಕಾರ್ಯಕ್ರಮ ಇದಾಗಿದ್ದು, ಒಟ್ಟಾಗಿ 18 ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದರು.
ಸಾಧಕಿಯರನ್ನು ಆಯ್ಕೆ ಮಾಡಲು ಪರಿಣಿತರ ತಂಡವನ್ನು ರಚಿಸಲಾಗಿದ್ದು, ಅದರಲ್ಲಿ ಡಾ.ಗಣೇಶ್ ಭಟ್, ಛಾಯಾ ಶ್ರೀವಾತ್ಸವ್, ಆರ್.ಜೆ.ಪ್ರದೀಪ್, ವನಿತಾ ಅಶೋಕ್, ದೀಪಾಲಿ ಸಿಕಂದ್, ಸಜ್ಜನ್ ಪೂವಯ್ಯ, ಡಾ.ಶೃತಿ ಚೇತನ್, ಸರಸ್ವತಿ ಪ್ರಿಯದರ್ಶಿನಿ, ಶತೃಘ್ನ ಶೆಟ್ಟಿ ಇದ್ದಾರೆ. ಜೂ.30ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಮಹಿಳೆಯರಿಗೆ ಫ್ಯಾಷನ್ ಶೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರ್ಜಿ ಸಲ್ಲಿಸುವವರು www.kwaaawards.com ವೆಬ್‌ಸೈಟ್‌ನಲ್ಲಿ ವಿವರಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಸಾಧಕಿಯರ ಆಯ್ಕೆ ತಂಡದ ಸದಸ್ಯ ಡಾ.ಗಣೇಶ್ ಭಟ್ ಮಾತನಾಡಿ, ಪ್ರತಿಯೊಬ್ಬ ಮಹಿಳೆ ಹಿಂದೆಯೂ ಸಾಧನೆಯಿದೆ. ಆದರೆ ಅದನ್ನು ಗುರುತಿಸುವುದನ್ನು ನಾವು ಮರೆತು ಬಿಡುತ್ತೇವೆ. ಅಂತಹ ಮಹಿಳೆಯರನ್ನು ಗುರುತಿಸುವ ಉತ್ತಮ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಇಲ್ಲಿ ಯಾರೂ ಕೂಡ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಎಂದು ತಿಳಿಸಿದರು.