ಸಿಂಡಿಕೇಟ್ ಬ್ಯಾಂಕ್ ಹೂಡಿಕೆ ಬಡ್ಡಿದರ ಹೆಚ್ಚಳ
Update: 2018-05-11 20:17 IST
ಬೆಂಗಳೂರು, ಮೇ 11: ಸಾರ್ವಜನಿಕ ವಲಯದ ಸಿಂಡಿಕೇಟ್ ಬ್ಯಾಂಕ್ ಎಲ್ಲ ಅವಧಿಗಳ ಹೂಡಿಕೆಗಳ ಮೇಲೆ ಎಂಸಿಎಲ್‌ಆರ್ ಶೇಕಡವಾರು ಬಡ್ಡಿ ದರಗಳನ್ನು 5ಬಿಪಿಎಸ್‌ನಡಿ ಪರಿಷ್ಕರಿಸಿ ಹೆಚ್ಚಳ ಮಾಡಿದೆ.
ಮಾಸಿಕ ಬಡ್ಡಿ ದರ ಶೇ.8ರಿಂದ ಶೇ.8.05, ಮೂರು ತಿಂಗಳ ದರ ಶೇ.8.10, ಅರ್ಧ ವಾರ್ಷಿಕ ದರ ಶೇ.8.30 ಹಾಗೂ ವಾರ್ಷಿಕ ಬಡ್ಡಿ ದರ ಶೇ.8.50ಕ್ಕೆ ಏರಿಕೆಯಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.