×
Ad

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮತ್ತೊಬ್ಬ ಸಿಟ್ ವಶಕ್ಕೆ?

Update: 2018-05-11 20:35 IST

ಬೆಂಗಳೂರು, ಮೇ 11: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮತ್ತೋರ್ವನನ್ನು ಸಿಟ್(ವಿಶೇಷ ತನಿಖಾ ದಳ) ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಶಂಕಿತ ವ್ಯಕ್ತಿಯೋರ್ವನನ್ನು ವಾರದ ಹಿಂದೆ ವಶಕ್ಕೆ ಪಡೆದಿರುವ ಸಿಟ್ ತಂಡ, ಇದುವರೆಗೆ ಆತನ ಬಗ್ಗೆ ವಿವರಗಳನ್ನು ಬಹಿರಂಗ ಪಡಿಸಿಲ್ಲ.

ಈಗಾಗಲೇ ಬಂಧನವಾಗಿರುವ ಸಂಘಪರಿವಾರ ಕಾರ್ಯಕರ್ತ ನವೀನ್ ಯಾನೆ ಹೊಟ್ಟೆ ಮಂಜ ನೀಡಿದ ಮಾಹಿತಿ ಆಧಾರದ ಮೇಲೆ ಮಂಗಳೂರು ಮೂಲದ ಯುವಕನನ್ನು ವಿಚಾರಣೆಗೊಳಪಡಿಸಲಾಗಿತ್ತು. ಆದರೆ ಪೂರಕ ಅಂಶಗಳು ಆತನ ವಿಚಾರಣೆಯಿಂದ ಹೊರ ಬಾರದ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಲಾಗಿದೆ. ಆತನ ಚಲನವಲನಗಳ ಮೇಲೆ ಸಿಟ್ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News