×
Ad

'ಮತದಾರರ ಬಲಗೈ ತೋರು ಬೆರಳಿಗೆ ಶಾಯಿ'

Update: 2018-05-12 22:07 IST

ಬೆಂಗಳೂರು, ಮೇ 12: ಯಲಹಂಕ ವಿಧಾನಸಭಾ ಕ್ಷೇತ್ರದ ಗಾಂಧಿನಗರ ಬೂತ್‌ನಂ 194ರ ಎಂಇಸಿ ಶಾಲೆಯಲ್ಲಿ ಮತದಾರರಿಗೆ ಬಲಗೈ ತೋರುಬೆರಳಿಗೆ ಗುರುತಿನ ಶಾಯಿ ಹಾಕಿ ಗೊಂದಲಕ್ಕೀಡು ಮಾಡಿದ ಘಟನೆ ನಡೆದಿದೆ.

ಶನಿವಾರ ಬೆಳಗ್ಗೆ ಮತದಾನ ಆರಂಭವಾದಾಗಿನಿಂದಲೂ ಮತಗಟ್ಟೆ ಅಧಿಕಾರಿಗಳು ಬಲಗೈ ತೋರು ಬೆರಳಿಗೆ ಶಾಯಿ ಹಾಕಿದ್ದಾರೆ. ಎಡಗೈ ಬೆರಳಿಗೆ ಶಾಯಿ ಹಾಕದೆ ಬಲಗೈ ಬೆರಳಿಗೆ ಹಾಕುತ್ತಿದ್ದಾರೆಂದು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದ ನಂತರ ಬಲಗೈಗೆ ಶಾಯಿ ಹಾಕಲು ಸೂಚಿಸಿದ್ದಾರೆ.

ಪೊಲೀಸರಿಂದ ನಿಂದನೆ:  ಯಲಹಂಕ ವಿಧಾನಸಭಾ ಕ್ಷೇತ್ರದ ನಾಗದಾಸನಹಳ್ಳಿಯಲ್ಲಿ ಚುನಾವಣೆ ನಡೆಯುತ್ತಿದ್ದ ವೇಳೆ ಮತಯಂತ್ರ ದೋಷದಿಂದ ಸುಮಾರು ಎರಡು ಗಂಟೆಗಳ ಕಾಲ ಮತದಾನ ಸ್ಥಗಿತವಾಗಿತ್ತು. ಗ್ರಾಮದ 500ಕ್ಕೂ ಹೆಚ್ಚು ಮತದಾರರು ಮತಚಲಾಯಿಸದೇ ಇದ್ದ ಕಾರಣ ಮತದಾರರು ಸಂಜೆ 6ಗಂಟೆಯವರೆಗೆ ಮತಚಲಾಯಿಸಲು ಹೆಚ್ಚಿನ ಸಮಯ ನಿಗದಿ ಮಾಡಬೇಕೆಂದು ಮತಗಟ್ಟೆ ಅಧಿಕಾರಿಗಳಿಗೆ ಮತದಾರರು ಆಗ್ರಹಿಸಿದರು. ಈ ವೇಳೆ ರಾಜಾನುಕುಂಟೆಯ ಪೊಲೀಸರು ಅವ್ಯಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News