ಬೆಂಗಳೂರು: ಮೊದಲು ಮತ ಹಾಕಿದವರಿಗೆ ಸಸಿ ವಿತರಣೆ
ಬೆಂಗಳೂರು, ಮೇ 12: ಮೊದಲು ಮತ ಚಲಾಯಿಸಿದ ಐದು ಮಂದಿಗೆ ಸಸಿಗಳನ್ನು ವಿತರಣೆ ಮಾಡುವ ಮೂಲಕ ಬಿ.ಪ್ಯಾಕ್ ಸಂಸ್ಥೆ ಮತದಾರರನ್ನು ಪ್ರೋತ್ಸಾಹಿಸಲಾಯಿತು.
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಆಯ್ದ ಮತಗಟ್ಟೆಗಳಿಗೆ ಬಿ.ಪ್ಯಾಕ್ ಸಂಸ್ಥೆಯ ಸದಸ್ಯರು ಮತದಾನ ಆರಂಭವಾಗುವ ಮೊದಲೇ ತೆರಳಿ ಮೊದಲು ಮತದಾನ ಮಾಡಿದವರಿಗೆ ಸಸಿಗಳನ್ನು ವಿತರಿಸಿ ಕೃತಜ್ಞತೆ ಸಲ್ಲಿಸಿದ್ದು, ಸಂಸ್ಥೆಯ ಮೋಹನ್ ದಾಸ್ ಪೈ, ಚಿತ್ರನಟ ಸುದೀಪ್ ಹಾಗೂ ರಾಘವೇಂದ್ರ ರಾಜಕುಮಾರ್ ಪ್ರಮುಖರಾಗಿದ್ದಾರೆ.
ಈ ವೇಳೆ ಮಾತನಾಡಿದ ನಟ ಸುದೀಪ್, ಪ್ರತಿಯೊಬ್ಬರೂ ಸಂವಿಧಾನಬದ್ಧವಾದ ಹಕ್ಕನ್ನು ಚಲಾವಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಪರಿಸರ ಹಾಗೂ ಪ್ರಜಾಪ್ರಭುತ್ವದ ಮೇಲೆ ತೋರಿಸುತ್ತಿರುವ ಕಾಳಜಿಗೆ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು.
ಮತ ಚಲಾವಣೆ ಮಾಡಿದಾಗ ಮಾತ್ರವೇ ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವ ಹಕ್ಕನ್ನು ಸಂಪಾದಿಸುತ್ತೇವೆ. 5 ವರ್ಷದ ಕರ್ನಾಟಕದ ಭವಿಷ್ಯವು ನಮ್ಮ ಬೆರಳ ತುದಿಯಲ್ಲಿರುತ್ತದೆ. ಅದನ್ನು ಉತ್ತಮ ಸಮಾಜ ನಿರ್ಮಾಣ ಮಾಡುವವರ ಕಡೆಗೆ ತೋರಿಸಬೇಕಾಗಿದ್ದು, ಅದಕ್ಕಾಗಿ ಸಂಸ್ಥೆ ಸಣ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.