ಬೆಂಗಳೂರು: ಮೇ 15 ರಂದು ನಗರದ ಹಲವೆಡೆ ನೀರು ವ್ಯತ್ಯಯ

Update: 2018-05-13 13:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 13: ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆ 1, 2 ಮತ್ತು 3ನೆ ಹಂತದ ಟಿ.ಕೆ.ಹಳ್ಳಿ, ಹಾರೋಹಳ್ಳಿ ತಾತಗುಣಿಯ ಯಂತ್ರಗಾರಗಳ ಉನ್ನತೀಕರಣದ ಸಲುವಾಗಿ ಮೇ 15ರ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ನಗರದ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ನಗರದ ಜಯನಗರ, ಜೆ.ಪಿ.ನಗರ, ಬಸವನಗುಡಿ, ಬನಶಂಕರಿ 2 ಮತ್ತು 3ನೆ ಹಂತ, ಚಾಮರಾಜಪೇಟೆ, ಬನಗಿರಿನಗರ. ಹೊಸಕೆರೆಹಳ್ಳಿ, ಕುಮಾರಸ್ವಾಮಿ ಲೇಔಟ್, ಪಧ್ಮನಾಭ ನಗರ, ಭೈರಸಂದ್ರ, ಜಾನ್ಸನ್ ಮಾರ್ಕೆಟ್, ಆಡುಗೋಡಿ, ದೊಮ್ಮಲೂರು, ಬಿಟಿಎಂ ಲೇಔಟ್, ಬಾಪೂಜಿನಗರ, ಮೈಸೂರು ರಸ್ತೆ, ಶ್ರೀರಾಂಪುರ, ಓಕಳೀಪುರ , ಇಂದಿರಾನಗರ 1ನೆ ಹಂತ, ಶ್ರೀನಗರ, ಹಲಸೂರು, ಶಾಂತಿನಗರ ಹಾಗೂ ಕೋರಮಂಗಲ, ಜಯನಗರ, ಚೋಳೂರು ಪಾಳ್ಯ, ಮೈಸೂರು ರಸ್ತೆಯಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಅಲ್ಲದೆ, ಜೀವನ್ ಭೀಮಾನಗರ, ವಿಲ್ಸನ್ ಗಾರ್ಡನ್ ರಸ್ತೆ, ಹೊಂಬೇಗೌಡ ನಗರ, ನೀಲಸಂದ್ರ, ಕೆ.ಆರ್.ಮಾರುಕಟ್ಟೆ ಪ್ರದೇಶ, ಯಶವಂತಪುರ, ಮಲ್ಲೇಶ್ವರಂ, ಮತ್ತಿಕೆರೆ. ಜಯಮಹಲ್, ವಸಂತನಗರ, ಆರ್.ಎಸ್.ಪಾಳ್ಯ, ಲಿಂಗರಾಜಪುರ, ಮುತ್ಯಾಲನಗರ, ಆರ್.ಟಿ.ನಗರ, ಸಂಜಯ್ ನಗರ, ಸದಾಶಿವನಗರ, ಹೆಬ್ಬಾಳ, ಪ್ಯಾಲೇಸ್ ಗುಟ್ಟಳ್ಳಿ, ಭಾರತೀ ನಗರ, ಸುಧಾಮನಗರ, ಪಿಳ್ಳಣ್ಣ ಗಾರ್ಡನ್, ಬನ್ನಪ್ಪ ಪಾರ್ಕ್, ಶಿವಾಜಿನಗರ, ಚಿಕ್ಕ ಲಾಲ್‌ಬಾಗ್, ಗವಿಪುರ, ಬ್ಯಾಟರಾಯನಪುರ, ಮೆಜೆಸ್ಟಿಕ್ ಕಸ್ತೂರಬಾ ರಸ್ತೆ, ಮಡಿವಾಳ, ಯೆಲಚೇನಹಳ್ಳಿ, ಇಸ್ರೋ ಲೇಔಟ್, ಸಂಪಂಗಿರಾಮನಗರ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ಭಾಗಶಃ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News