‘ಜಿಎಸ್ಟಿ ಜಾರಿ ಬಳಿಕವೂ ಆರ್ಥಿಕ ಚೇತರಿಕೆ’

Update: 2018-05-13 16:00 GMT

ಬೆಂಗಳೂರು, ಮೇ 13: ಗರಿಷ್ಟ ಮೊತ್ತದ ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿ ಬಳಿಕ ಆರ್ಥಿಕತೆಗೆ ಆದ ಅಲ್ಪಕಾಲದ ತೊಂದರೆ ಬಳಿಕ, ಇದೀಗ ಆರ್ಥಿಕತೆ ಚೇತರಿಕೆ ಕಂಡಿದೆ ಎಂದು ಎಸ್‌ಕೆಎಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಒಸ್ಟಾರಿಯಸ್ ಹೇಳಿದ್ದಾರೆ.

ಪ್ರಸಕ್ತ ತ್ರೈಮಾಸಿಕದಲ್ಲಿ ನಮ್ಮ ಸಾಧನೆ, ವಿವಿಧ ಕ್ಷೇತ್ರಗಳಲ್ಲಿ ನಾವಿನ್ಯತೆಯ ಮೂಲಕ ಉತ್ತಮ ಸಾಧನೆ ಕಂಡಿದ್ದೇವೆ. ಅಲ್ಲದೆ ತಂತ್ರಜ್ಞಾನ ಮತ್ತು ಉತ್ಪಾದನಾ ಉತ್ಕೃಷ್ಟತೆಯನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. 2018ರ ಮಾ.31ಕ್ಕೆ ಕಂಪೆನಿಯ ಉತ್ಪನ್ನಗಳ ನಿವ್ವಳ ಮಾರಾಟ 28,048 ದಶಲಕ್ಷ ರೂ.ಆಗಿದ್ದು, ಜಿಎಸ್ಟಿ ಜಾರಿಯ ನಡುವೆ ಶೇ.4.5ರಷ್ಟು ಪ್ರಗತಿ ಸಾಧಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News