×
Ad

ಬೆಂಗಳೂರು: ಮೇ 24ರಿಂದ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ

Update: 2018-05-13 23:09 IST

ಬೆಂಗಳೂರು, ಮೇ 14: ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್‌ನ ಬೆಳ್ಳಿಹಬ್ಬದ ಅಂಗವಾಗಿ ಮೇ 24ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ‘ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕ್ರತಿಕ 9ನೇ ಸಮ್ಮೇಳನ’ ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಸಾಂಸ್ಕ್ರತಿಕ ಸಮ್ಮೇಳನದಲ್ಲಿ ಪ್ರತಿ ಕವಿಗಳಿಗೆ 3 ಚುಟುಕು ಅಥವಾ 1 ಕವಿತೆ ವಾಚಿಸಲು ಅವಕಾಶವಿರುತ್ತದೆ. ಆಸಕ್ತರು ತಾವು ವಾಚನ ಮಾಡುವ ಕವಿತೆಯ ಒಂದು ನಕಲು ಪ್ರತಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ 300ರೂ ಪ್ರವೇಶ ಶುಲ್ಕದೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

‘ನೋಡಿಕಲಿ ಬೇಸಿಗೆ ಶಿಬಿರ’ದಲ್ಲಿ ಭಾಗವಹಿಸುವ ಮಕ್ಕಳು ಅಂದು ಬೆಳಗ್ಗೆ 9ರಿಂದ 10ಗಂಟೆಯೊಳಗೆ ತಮ್ಮ ಸ್ವವಿವರ, ವಿಳಾಸ, ದೂರವಾಣಿ ಸಂಖ್ಯೆ ಹಾಗೂ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಹೆಸರು ನೋಂದಾಯಿಸಿ ಕೊಳ್ಳಬಹುದು. ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ: 98453 07327 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News