ವಲೇರಿಯನ್ ಲಿಗೊರಿ ರೋಚ್‌

Update: 2018-05-14 15:50 GMT

ಬ್ರಹ್ಮಾವರ, ಮೇ 13: ಬಾರಕೂರು ಹೊಸಾಳ ಗ್ರಾಮದ ಚೌಳಿಕೆರೆ ಸಮೀಪದ ನಿವಾಸಿ, ಖ್ಯಾತ ಉದ್ಯಮಿ, ಕೃಷಿಕ ವಲೇರಿಯನ್ ಲಿಗೊರಿ ರೋಚ್ (94 ) ಅವರು ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಓರ್ವ ಪ್ರಸಿದ್ಧ ರೈಲ್ವೇ ಟನಲ್ ಹಾಗೂ ಅಂಡರ್‌ಗ್ರೌಂಡ್ ಪವರ್ ಪ್ರೊಜೆಕ್ಟ್ ಕಾಂಟ್ರಾಕ್ಟರ್ ಆಗಿದ್ದು, ಮಂಗಳೂರಿನ ಕುಲಶೇಖರ್ ರೈಲ್ವೇ ಟನಲ್ ಕಾಮಗಾರಿಯೊಂದಿಗೆ ಅನೇಕ ರೈಲ್ವೇ ಹಾಗೂ ಅಂಡರ್‌ಗ್ರೌಂಡ್ ಪವರ್ ಪ್ರೊಜೆಕ್ಟ್ ಕಾಮಗಾರಿಗಳನ್ನು ನಿರ್ಮಿಸಿದ್ದಾರೆ. ಕ್ಲಾಸ್ 1 ಪಿ.ಡಬ್ಲ್ಯು.ಡಿ. ಕಾಂಟ್ರಾಕ್ಟರ್ ಆಗಿ ಸೇವೆ ಸಲ್ಲಿಸಿದ್ದು ಮಂಗಳೂರಿನ ಮುಕ್ಕ ಸಮೀಪದ ಸಸಿಹಿತ್ಲು ಸಮುದ್ರ ಕಿನಾರೆಗೆ ತಡೆಗೋಡೆ ನಿರ್ಮಾಣ ಕಾರ್ಯ ಹಾಗೂ ಅನೇಕ ನಿರ್ಮಾಣ ಕೆಲಸಗಳನ್ನು ನಿರ್ವಹಿಸಿದ್ದಾರೆ.

ಬಾರಕೂರು ವಿದ್ಯಾಭಿವರ್ಧಿನಿ ಸಂಘದ ದೀರ್ಘಾವಧಿಯಲ್ಲಿ ಅಧ್ಯಕ್ಷರಾಗಿದ್ದು 2010ರಿಂದ ಗೌರವಾಧ್ಯಕ್ಷರಾಗಿ ಸೇವಾ ನಿರತರಾಗಿರುವುದಲ್ಲದೇ ನ್ಯಾಷನಲ್ ಐ.ಟಿ.ಐ., ಆಂಗ್ಲ ಮಾದ್ಯಮ ಫ್ರೌಡ ಶಾಲೆಯ ಹಾಗೂ ಪದವಿ ಕಾಲೇಜಿನ ಸ್ಥಾಪನೆಗೆ ಅತ್ಯಧಿಕ ಶ್ರಮ ವಹಿಸಿದ್ದಾರೆ.

ಓರ್ವ ಉತ್ತಮ ಕೃಷಿಕರಾಗಿದ್ದು ಕೃಷಿಕರಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಜನಾನುರಾಗಿಯಾಗಿದ್ದರು.ಮೃತರು ಇಬ್ಬರು ಪುತ್ರಿಯರನ್ನು ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ