×
Ad

ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಲು ಕಾಂಗ್ರೆಸ್ ಸಿದ್ಧತೆ

Update: 2018-05-16 16:22 IST

ಬೆಂಗಳೂರು, ಮೇ 16: ಸರಕಾರ ರಚನೆಗೆ ಗೊಂದಲ ಮುಂದುವರಿದಿರುವಂತೆಯೇ ಬಿಜೆಪಿ ಮಾಡಬಹುದಾದ ಕುದುರೆ ವ್ಯಾಪಾರವನ್ನು ತಡೆಯುವ ತಂತ್ರದ ಭಾಗವಾಗಿ ಪಕ್ಷದ 78 ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ರಾಮನಗರ ತಾಲೂಕಿನ ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ಗೆ ಶಾಸಕರನ್ನು ಕರೆದೊಯ್ಯಲು ಕಾಂಗ್ರೆಸ್ ನಿರ್ಧರಿಸಿದ್ದು, ಕೆಪಿಸಿಸಿ ಕಚೇರಿ ಬಳಿ ಬಸ್‌ಗಳನ್ನು ಸಿದ್ಧಪಡಿಸಲಾಗಿದೆ. ರೆಸಾರ್ಟ್‌ನಲ್ಲಿ ಸುಮಾರು 100ರಷ್ಟು ಕೊಠಡಿಗಳನ್ನು ಬುಕ್ ಮಾಡಲಾಗಿದೆ.

ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಹಾಗೂ ಡಾ.ಜಿ. ಪರಮೇಶ್ವರ್‌ಗೆ ವಹಿಸಿಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News