ಊಹಿಸಲಾಗದಷ್ಟು ಬಹುಮತ ಸಾಬೀತು:ಶ್ರೀರಾಮುಲು
Update: 2018-05-17 12:12 IST
ಬೆಂಗಳೂರು, ಮೇ 17: ಯಾರೂ ಊಹಿಸಲಾಗದಷ್ಟು ಬಹುಮತ ಸಾಬೀತುಪಡಿಸುವುದಾಗಿ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.
‘‘ಕಾಂಗ್ರೆಸ್, ಜೆಡಿಎಸ್‌ನಲ್ಲಿ ದೊಡ್ಡ ಮಟ್ಟದ ಅಸಮಾಧಾನಿತರಿದ್ದಾರೆ. ಬಿಜೆಪಿ ಜೊತೆಗೆ ಪಕ್ಷೇತರ ಶಾಸಕರಿದ್ದಾರೆ. ಅವರೆಲ್ಲರೂ ನಮ್ಮ ಜೊತೆಯೇ ಇರುತ್ತಾರೆ. ಬೇರೆ ಬೇರೆ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’’ ಎಂದು ಶ್ರೀರಾಮುಲು ಹೇಳಿದ್ದಾರೆ.