14ನೆ ವಿಧಾನಸಭೆ ವಿಸರ್ಜನೆಗೆ ಬಿಎಸ್‌ವೈ ನಿರ್ಣಯ
Update: 2018-05-17 16:58 IST
ಬೆಂಗಳೂರು, ಮೇ 17: ನೂತನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ವಿಧಾನಸೌಧದ ಸಚಿವ ಸಂಪುಟ ಸಭಾ ಭವನದಲ್ಲಿ ನಡೆದ ಏಕ ಸದಸ್ಯ ಸಚಿವ ಸಂಪುಟ ಸಭೆಯಲ್ಲಿ 14ನೆ ವಿಧಾನಸಭೆ ವಿಸರ್ಜನೆಗೆ ನಿರ್ಣಯ ಕೈಗೊಳ್ಳಲಾಯಿತು.
ಆದರೆ, ಹಂಗಾಮಿ ಸ್ಪೀಕರ್ ನೇಮಕ ಹಾಗೂ 15ನೆ ವಿಧಾನಸಭೆಯ ಮೊದಲ ಜಂಟಿ ಅಧಿವೇಶನ ಕರೆಯಲು ದಿನಾಂಕ ನಿಗದಿ ಮಾಡುವ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಕೇವಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದು ಯಡಿಯೂರಪ್ಪ ನಿರ್ಗಮಿಸಿದರು.