ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಯನ್ನು ಮಣಿಸಲಿದ್ದಾರೆ: ಕುಮಾರಸ್ವಾಮಿ
Update: 2018-05-18 21:33 IST
ಬೆಂಗಳೂರು, ಮೇ 18: ವಿಶ್ವಾಸಮತಯಾಚನೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ನಾವು ನಾಳೆ ನಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದೇವೆ. ವಿಶ್ವಾಸಮತಯಾಚನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.
ಇಬ್ಬರು ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಿದೆ. ಅವರಲ್ಲೊಬ್ಬರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದ ಕುಮಾರಸ್ವಾಮಿ, “ಸ್ಪೀಕರ್ ಹುದ್ದೆಯನ್ನು ದುರುಪಯೋಗಪಡಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಬೋಪಯ್ಯರಿಗೆ ಛೀಮಾರಿ ಹಾಕಿತ್ತು. ಇದೀಗ ರಾಜ್ಯಪಾಲರು ಅವರನ್ನೇ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ” ಎಂದರು.
ಬಿಎಸ್ಪಿ ಶಾಸಕ ಮಹೇಶ್ ನಮ್ಮ ಜೊತೆಗಿರಲಿದ್ದಾರೆ. ವಿಶ್ವಾಸಮತಯಾಚನೆಯಲ್ಲಿ ಗೆಲುವು ನಮಗೇ ಖಚಿತ ಎಂದವರು ಇದೇ ಸಂದರ್ಭ ವಿಶ್ವಾಸ ವ್ಯಕ್ತಪಡಿಸಿದರು.