×
Ad

ಬೆಂಗಳೂರು: ಕಾಲು ಜಾರಿ ಜಲಪಾತಕ್ಕೆ ಬಿದ್ದ ಯುವಕ ಪ್ರಾಣಾಪಾಯದಿಂದ ಪಾರು

Update: 2018-05-18 21:56 IST

ಬೆಂಗಳೂರು, ಮೇ 18: ನಗರದ ಹೊರವಲಯದ ಕಗ್ಗಲೀಪುರ ಸಮೀಪ ಮೋಜು ಮಾಡಲೆಂದು ಜಲಪಾತಕ್ಕೆ ಹೋಗಿ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನಗರದ ಬಿಟಿಎಂ ಬಡಾವಣೆಯ ನವಾಝ್(18) ಎಂಬಾತ ಯುವಕ ಪಾರಾಗಿದ್ದು, ಇಲ್ಲಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

ಪ್ರವಾಸಿ ತಾಣ ಬನ್ನೇರುಘಟ್ಟ ಅರಣ್ಯಕ್ಕೆ ಬಂದಿದ್ದ ನವಾಜ್ ಟಿ.ಕೆ ಜಲಪಾತದಲ್ಲಿ ಇಳಿಯಲು ಹೋಗಿ 50 ಅಡಿ ಬಂಡೆ ಮೇಲಿನಿಂದ ಕೆಳಗೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲು ಜಾರಿ ಬೀಳುವ ದೃಶ್ಯವನ್ನು ಪಕ್ಕದಲ್ಲೇ ಇದ್ದ ಯುವಕನೊಬ್ಬ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯವು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News