15 ಕೋಟಿ ಕೊಡೋಣಾ, ಇಲ್ಲಾಂದ್ರೆ ಕ್ಯಾಬಿನೆಟ್ ಮಿನಿಸ್ಟರ್ ಹುದ್ದೆ ಜೊತೆ 5 ಕೋಟಿ ಕೊಡೋಣಾ

Update: 2018-05-19 06:47 GMT

ಬೆಂಗಳೂರು, ಮೇ 19: ಕಾಂಗ್ರೆಸ್ ಶಾಸಕರೊಬ್ಬರನ್ನು ತಮ್ಮತ್ತ ಸೆಳೆಯಲು ಬಿಎಸ್ ವೈ ಆಪ್ತ ಪುಟ್ಟಸ್ವಾಮಿ ಹಾಗು ಬಿಎಸ್ ವೈ ಪುತ್ರ ವಿಜಯೇಂದ್ರ ಕಾಂಗ್ರೆಸ್ ಶಾಸಕರ ಪತ್ನಿಗೆ ಕರೆ ಮಾಡಿ ಭಾರೀ ಲಂಚದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಪೂರಕವಾಗಿರುವ ಆಡಿಯೋವೊಂದು ವೈರಲ್ ಆಗುತ್ತಿದೆ.

ಕಾಂಗ್ರೆಸ್ ಶಾಸಕನ ಪತ್ನಿ ಜೊತೆ ಮಾತನಾಡುವ ಪುಟ್ಟಸ್ವಾಮಿಯವರದ್ದು ಎನ್ನಲಾದ ಧ್ವನಿ, “ಸಾಹೇಬ್ರ ಹತ್ರಾನೂ ಮಾತನಾಡಿದ್ದೀನಿ. ನಿಮ್ಮ ಪ್ರಾಬ್ಲಂ ಸಾಲ್ವ್ ಮಾಡ್ತೀನಿ. ಸೆಂಟ್ರಲ್ ಸರಕಾರ ನಮ್ಮದು” ಎಂದು ಹೇಳುತ್ತದೆ.

ಸಾಲ್ವ್ ಅಂದರೆ ಯಾವ ರೀತಿ ಎಂಬ ಪ್ರಶ್ನೆಗೆ, “ಲೀಗಲ್ ಆಗಿ ಮಾಡ್ತೀವಿ. ದುಡ್ಡು ಬೇಕಂದ್ರೆ 15 (ಕೋಟಿ) ಕೊಡೋಣಾ, ಇಲ್ಲಾಂದ್ರೆ ಕ್ಯಾಬಿನೆಟ್ ಮಿನಿಸ್ಟರ್ ಹುದ್ದೆ ಜೊತೆಗೆ 5 (5 ಕೋಟಿ) ಕೊಡೋಣಾ” ಎಂದು  ಉತ್ತರಿಸಲಾಗುತ್ತದೆ.

ನಂತರ ಮತ್ತೊಂದು ಆಡಿಯೋದಲ್ಲಿ ಬಿಎಸ್ ವೈ ಪುತ್ರ ವಿಜಯೇಂದ್ರ ಮಾತನಾಡಿದ್ದಾರೆ ಎನ್ನಲಾಗಿದ್ದು, “ನಮಸ್ತೆ ಮೇಡಂ. ತೊಂದರೆ ಏನೂ ಇಲ್ಲ. ಅವರು (ಕಾಂಗ್ರೆಸ್ ಶಾಸಕ) ಮಂತ್ರಿಯಾಗ್ತಾರೆ ಬಿಡಿ. ಕೇಸ್ ನಮ್ಮ ಹತ್ರಾನೇ ಇರುತ್ತೆ. ನಾನು 30 ಕೇಸ್ ಎದುರಿಸಿದ್ದೆ. ನನಗೂ ಗೊತ್ತು ಅದರ ನೋವು. ಸರಕಾರನೇ ನಮ್ಮದು ಇರೋದ್ರಿಂದ ಏನೂ ತೊಂದರೆ ಇಲ್ಲ.
ಏನ್ ಕೇಸ್” ಎಂದು ಪ್ರಶ್ನಿಸುವುದು ಕೇಳಿಸುತ್ತದೆ. ಇದಕ್ಕೆ “ಮೈನಿಂಗ್ ಕೇಸ್ ನಿಮಗೆ ಗೊತ್ತಿದ್ಯಲ್ಲ” ಎಂದು ಮಹಿಳೆ ಉತ್ತರಿಸಿದ್ದು, “ನಮ್ಮದೇ ಸರಕಾರ ಇರೋದ್ರಿಂದ ಏನೂ ಸಮಸ್ಯೆಯಾಗಲ್ಲ. ಯಡಿಯೂರಪ್ಪ ಇರೋದ್ರಿಂದ ಇನ್ನೊಬ್ರ ಭವಿಷ್ಯ ಹಾಳು ಮಾಡಿ ನಮ್ಮ ಭವಿಷ್ಯ ಒಳ್ಳೆದು ಮಾಡಲ್ಲ” ಎಂದು ತನ್ನನ್ನು ವಿಜಯೇಂದ್ರ ಎಂದು ಪರಿಚಯಿಸಿಕೊಂಡವರು ಹೇಳುವುದು ಆಡಿಯೋದಲ್ಲಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News