ವಿಧಾನಸಭೆಯ ಘನತೆಗೆ ಚ್ಯುತಿ ತರಬೇಡಿ: ಹಂಗಾಮಿ ಸ್ಪೀಕರ್ ಬೋಪಯ್ಯ

Update: 2018-05-19 14:39 GMT

ಬೆಂಗಳೂರು, ಮೇ 19: ‘ಕರ್ನಾಟಕ ರಾಜ್ಯ ವಿಧಾನಸಭೆಗೆ ತನ್ನದೆ ಆದ ಘನತೆ, ಗೌರವವಿದ್ದು, ಅದಕ್ಕೆ ಯಾವುದೇ ರೀತಿಯ ಚ್ಯುತಿಯಾಗದಂತೆ ವಿಧಾನಸಭೆಯ ಎಲ್ಲ ಸದಸ್ಯರ ನಡೆದುಕೊಳ್ಳುತ್ತಾರೆ’ ಎಂಬ ನಂಬಿಕೆ ನನ್ನದು ಎಂದು ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಹದಿನೈದನೆ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ನೂತನ ಸದಸ್ಯರಿಗೆ ಪ್ರಮಾಣ ವಚನ/ಪ್ರತಿಜ್ಞಾ ವಚನ ಸ್ವೀಕಾರದ ಬಗ್ಗೆ ಮಾತನಾಡಿದ ಅವರು, ಹದಿನೈದನೆ ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲ ಸದಸ್ಯರಿಗೂ ಅಭಿನಂದನೆಗಳು. ಈ ಶಾಸನ ಸಭೆಗೆ ಹೊಸದಾಗಿ ಹಲವು ಮಂದಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.

ರಾಜ್ಯ ವಿಧಾನಸಭೆಗೆ ತನ್ನದೇ ಆದ ಘನತೆ, ಗೌರವ ಇದೆ. ಈ ಘನತೆ ಗೌರವಕ್ಕೆ ಚ್ಯುತಿಯಾಗದಂತೆ ಸದಸ್ಯರುಗಳು ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ತಮಗಿದೆ ಎಂದ ಅವರು, ರಾಜ್ಯದ ಜನತೆ ನಮ್ಮನ್ನು ಇಲ್ಲಿಗೆ ಆರಿಸಿ ಕಳುಹಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಿಸೋಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News