ಆನ್ ಫೈರ್ ಮೂವ್‌ಮೆಂಟ್ ವತಿಯಿಂದ ಆನ್‌ಲೈನ್ ಇಂಗ್ಲಿಷ್ ಕವಿತೆ ಸ್ಪರ್ಧೆ

Update: 2018-05-19 15:10 GMT

ಬೆಂಗಳೂರು, ಮೇ 19: ನಗರದ ಆನ್ ಫೈರ್ ಮೂವ್‌ಮೆಂಟ್ ವತಿಯಿಂದ ಆನ್‌ಲೈನ್ ಇಂಗ್ಲಿಷ್ ಕವಿತೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಆನ್ ಫೈರ್ನ ಫೋಕ್ವಿಯಾ ವಾಜಿದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಕವಿತೆಗಳನ್ನು ಆನ್‌ಲೈನ್ ಮೂಲಕ ಕಳುಹಿಸಬಹುದಾಗಿದೆ. ಕಳಿಸುವ ಕವಿತೆಗಳು 50 ಪದ ಮೀರಿರಬಾರದು. ಆಯ್ದ ಮೂರು ಕವಿತೆಗಳಿಗೆ 25, 15, 10 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವವರು ತಾವು ರಚಿಸಿದ ಕವನವನ್ನು ನಮ್ಮ ವೆಬ್‌ಸೈಟ್ www.stayonfire.in ಗೆ ಲಾನ್ ಇನ್ ಆಗಿ, ಅದರಲ್ಲಿ ಸಂಪೂರ್ಣ ವಿಳಾಸವನ್ನು ದಾಖಲಿಸಬೇಕು. ಅನಂತರ ಅಲ್ಲಿಯೇ ನೀಡಿರುವ ಕವನ ಪೋಸ್ಟ್ ಮಾಡುವ ಸ್ಥಳದಲ್ಲಿ ನೀವು ಬರೆದ ಕವನವನ್ನು ಹಾಕಿ ನಮಗೆ ಕಳುಹಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News