×
Ad

ಮತ್ತೆ ಆರೋಗ್ಯ ಸಚಿವ ಸ್ಥಾನ ಸಿಗುವ ವದಂತಿ ಬಗ್ಗೆ ಯು.ಟಿ. ಖಾದರ್ ಹೇಳಿದ್ದೇನು ?

Update: 2018-05-19 20:48 IST

ಬೆಂಗಳೂರು, ಮೇ 19: ರಾಜ್ಯದಲ್ಲಿ ಇನ್ನಷ್ಟೇ ಅಸ್ತಿತ್ವಕ್ಕೆ ಬರಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರಕಾರದಲ್ಲಿ ಶಾಸಕ ಯು.ಟಿ. ಖಾದರ್ ಅವರಿಗೆ ಆರೋಗ್ಯ ಸಚಿವ ಸ್ಥಾನ ಸಿಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವರು ಇದನ್ನು ಅಧಿಕೃತ ಎಂದು ನಂಬಿದ್ದು, ಅಭಿನಂದನೆ ಗಳ ಮಹಾಪೂರವೇ ಖಾದರ್ ಅವರಿಗೆ ಸಲ್ಲಿಕೆಯಾಗುತ್ತಿವೆ.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಯು.ಟಿ.ಖಾದರ್ ಹೊಸ ಸರಕಾರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕಾರ ಅಥವಾ ಖಾತೆ ಹಂಚಿಕೆಯ ಬಗ್ಗೆ ಯಾವ ತೀರ್ಮಾನವೂ ಆಗಿಲ್ಲ.  ಅದೆಲ್ಲವನ್ನೂ ಪಕ್ಷದ ಹೈಕಮಾಂಡ್ ಮತ್ತು ನೂತನ ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. ಆವರೆಗೆ ಯಾರೂ ಇಂತಹ ಸುದ್ದಿಗಳನ್ನು ಹರಡಬಾರದು ಹಾಗೂ ಮೈತ್ರಿಕೂಟ ಬಲಪಡಿಸಲು ಸಹಕರಿಸಬೇಕು ಎಂದು ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸಲು ಸಿದ್ಧ ಎಂದು ಖಾದರ್  ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News