×
Ad

ಟೊಯೋಟಾ ಕಿರ್ಲೋಸ್ಕರ್‌ನಿಂದ ನೂತನ ಸೆಡಾನ್ ಯಾರಿಸ್ ಕಾರು ಬಿಡುಗಡೆ

Update: 2018-05-19 23:10 IST

ಬೆಂಗಳೂರು, ಮೇ 19: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ತನ್ನ ವೈವಿಧ್ಯಪೂರ್ಣ ಸೆಡಾನ್-ಯಾರಿಸ್ ಕಾರನ್ನು ಬಿಡುಗಡೆಗೊಳಿಸಿತು.

ಪ್ರಸಕ್ತ ವರ್ಷ ಅತ್ಯಂತ ನಿರೀಕ್ಷಿತ ಕಾರುಗಳಲ್ಲಿ ಒಂದಾಗಿರುವ ಯಾರಿಸ್ ಅತ್ಯುನ್ನತ ವಿನ್ಯಾಸ ಮತ್ತು ನಿಶ್ಯಬ್ದತೆ, ಚಲನಶೀಲ ಕಾರ್ಯಕ್ಷಮತೆ ಹಾಗೂ ಸುರಕ್ಷತೆ ಹಾಗೂ ನವನವೀನ ತಂತ್ರಜ್ಞಾನಕ್ಕೆ ಆದ್ಯತೆ ಕೊಡಲಾಗಿದೆ. ಗ್ರಾಹಕರು ಬುಕಿಂಗ್ ವ್ಯವಸ್ಥೆಯನ್ನು ದೇಶದ ಯಾವುದೇ ಅಧಿಕೃತ ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ಮಾಡಬಹುದಾಗಿದೆ. ವಾಹನದ ವಿತಣೆಗಳು ಇಂದಿನಿಂದ ಆರಂಭವಾಗಲಿವೆ.

‘ಒಂದು ದೇಶ ಒಂದೇ ಮಾರಾಟ ದರ’ ಎಂಬ ಚಿಂತನೆಯನ್ನಾಧರಿಸಿ ಸೆಡಾನ್ -ಯಾರಿಸ್ ಈಗ ಭಾರತದ ಎಲ್ಲ ಡೀಲರ್‌ಶಿಪ್‌ಗಳಲ್ಲಿ ಒಂದೇ ದರದಲ್ಲಿ ಲಭ್ಯವಾಗುತ್ತಿದೆ. ಈ ಯಾರಿಸ್ ರೂ. 8.75ಲಕ್ಷ ರೂ.ನಿಂದ 14.07ಲಕ್ಷ ವರೆಗಿನ ಆಕರ್ಷಕ ದರ ಶ್ರೇಣಿಯಲ್ಲಿ ಲಭ್ಯವಿದೆ. ಈ ದರಗಳು ಎಕ್ಸ್ ಶೋ ರೂಮ್ ಮಟ್ಟದಲ್ಲಿ ದೇಶದ ಎಲ್ಲೆಡೆ ಒಂದೇ ಆಗಿರುತ್ತದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಉಪ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News