×
Ad

5 ವರ್ಷಕ್ಕೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿಕೊಳ್ಳಿ: ಸರಕಾರಕ್ಕೆ ರಾಜ್ಯ ಶಿಕ್ಷಕರ ಸಂಘ ಪ್ರಸ್ತಾವನೆ

Update: 2018-05-20 18:36 IST

ಬೆಂಗಳೂರು, ಮೇ 20: ಸರಕಾರಿ ಶಾಲೆಗಳಲ್ಲಿ 5 ವರ್ಷ ವಯಸ್ಸಿನ ಮಕ್ಕಳಿಗೆ 1 ನೆ ತರಗತಿಗೆ ಪ್ರವೇಶಿಸಲು ಅವಕಾಶ ನೀಡುವಂತೆ ಮತ್ತು ಪೂರ್ವ ಪ್ರಾಥಮಿಕ ವಿಭಾಗವನ್ನು ತೆರೆಯುವಂತೆ ರಾಜ್ಯ ಶಿಕ್ಷಣ ಇಲಾಖೆ ಮುಂದೆ ರಾಜ್ಯ ಶಿಕ್ಷಕರ ಸಂಘ ಪ್ರಸ್ತಾವನೆ ಸಲ್ಲಿಸಿದೆ.

ಈ ಮೊದಲು 5ವರ್ಷ, 5ತಿಂಗಳಾದ ಮಕ್ಕಳನ್ನು ಮಾತ್ರ ಶಾಲೆಗೆ ದಾಖಲಿಸಿಕೊಳ್ಳಲಾಗುತ್ತಿತ್ತು. ಆದರೆ ಈ ವರ್ಷ ನಿಯಮವನ್ನು ಬದಲಾಯಿಸಿರುವ ಶಿಕ್ಷಣ ಇಲಾಖೆ 5 ವರ್ಷ 10 ತಿಂಗಳಾದರೆ ಮಾತ್ರ 1ನೆ ತರಗತಿಗೆ ಪ್ರವೇಶ ನೀಡುವ ನಿರ್ಧಾರ ಕೈಗೊಂಡಿದೆ. ಈ ಬದಲಾವಣೆಯಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಕೊರತೆಯುಂಟಾಗುತ್ತಿದೆ ಎಂದು ಶಿಕ್ಷಕರ ಸಂಘ ಎಚ್ಚರಿಸಿದೆ.

5 ವರ್ಷ ಮೇಲ್ಪಟ್ಟ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲಾಗುವುದಿಲ್ಲ. ಹೀಗಾಗಿ ಪೋಷಕರು ಖಾಸಗಿ ಶಾಲೆಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಕೆಲವು ಪೋಷಕರಂತೂ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸುತ್ತಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ವಿಭಾಗಗಳಾದ ನರ್ಸರಿ, ಎಲ್ಕೆಜಿ, ಯುಕೆಜಿಯನ್ನು ಪ್ರಾರಂಭಿಸಲು ಸಹ ಶಿಕ್ಷಕರ ಸಂಘ ಬೇಡಿಕೆ ಇಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News