ಆರ್‌ಟಿಇ ಸೀಟು ನೀಡದೆ ವಂಚನೆ: ಆರೋಪ

Update: 2018-05-20 14:24 GMT

ಬೆಂಗಳೂರು, ಮೇ 20: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಯಡಿ ಸೀಟು ಸಿಕ್ಕಿದ್ದರೂ ಇಲ್ಲಿನ ರಾಜಾಜಿನಗರದ ಕೆಎಲ್‌ಇ ಶಾಲೆ ಪ್ರವೇಶ ನೀಡದೆ ವಂಚಿಸಿದೆ ಎಂದು ಪೋಷಕ ಡಿ.ಆರ್.ನಾಗೇಂದ್ರ ಆರೋಪಿಸಿದ್ದಾರೆ.

ಎ.27ರಂದು ದಾಖಲಾತಿಗಾಗಿ ಶಾಲೆಗೆ ಹೋದ ಸಂದರ್ಭದಲ್ಲಿ ಆಡಳಿತ ಮಂಡಳಿಯು ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಅನಂತರ ಬನ್ನಿ ಎಂದು ತಿಳಿಸಿದ್ದರು. ದಾಖಲಾತಿಯ ಕೊನೆದಿನ ಪ್ರವೇಶ ನೀಡಲು ಸಾಧ್ಯವಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆಂದು ಅವರು ಬಿಇಒ ದೂರು ಸಲ್ಲಿಸಲಾಗಿದೆ ಎಂದು ನಾಗೇಂದ್ರ ಹೇಳಿದ್ದಾರೆ.

ಅಲ್ಲದೆ, ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇವೆ. ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಿದ ನಂತರ ಮತ್ತೆ ಶಾಲೆ ಬದಲಾವಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News