​ಟಿಕೆಟ್ ಯಾಕಿಲ್ಲ?

Update: 2018-05-21 18:33 GMT

ಮಾನ್ಯರೇ,

ನಗರದ ಖಾಸಗಿ ಸಿಟಿಬಸ್ಸುಗಳು ಮತ್ತೆ ಟಿಕೆಟ್ ಬೆಲೆ ಏರಿಸಿದ್ದು, ಇದೀಗ ಬಸ್ಸು ನಿರ್ವಾಹಕರು ಕನಿಷ್ಠ ಟಿಕೆಟ್ ಬೆಲೆ 8. ರೂ. ಪ್ರಯಾಣಿಕರಿಂದ ತೆಗೆದುಕೊಳ್ಳುತ್ತಿದ್ದಾರೆ. ಆದರೆ ತೆಗೆದು ಕೊಂಡ ಹಣಕ್ಕೆ ಪ್ರತಿಯಾಗಿ ಯಾವ ಬಸ್ಸಿನವರೂ ಟಿಕೆಟ್ ಕೊಡುವುದಿಲ್ಲ.! ನಮ್ಮದೇ ನೆರೆಯ ಜಿಲ್ಲೆಯಾದ ಉಡುಪಿಯಲ್ಲೂ ಖಾಸಗಿ ಬಸ್ಸುಗಳ ವ್ಯವಸ್ಥೆ ಇದೆ. ಆದರೆ ಇಲ್ಲಿ ಪಡೆದುಕೊಂಡ ಮೊತ್ತಕ್ಕೆ ಟಿಕೆಟ್ ನೀಡುತ್ತಿರುವಾಗ ದ.ಕ.ದಲ್ಲಿ ಮಾತ್ರ ಹೀಗೇಕೆ?
ಕೆಲವು ಬಸ್ಸಿನ ನಿರ್ವಾಹಕರು ಸಂಬಂಧಿತ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಟಿಕೆಟ್ ಮೆಶೀನ್ ಅನ್ನು ಕುತ್ತಿಗೆಗೆ ನೇತಾಡಿಸಿಕೊಂಡಿರುತ್ತಾರೆ. ಆದರೆ ಇವರು ಯಾರಿಗೂ ಅದರಿಂದ ಟಿಕೆಟ್ ನೀಡುವುದಿಲ್ಲ.
ಆದ್ದರಿಂದ ಸಂಬಂಧಿತ ಅಧಿಕಾರಿಗಳು ಇಂತಹ ಸಮಸ್ಯೆಗಳ ಬಗ್ಗೆ ಕೂಡಲೇ ಕಣ್ಣಿಟ್ಟು, ಪ್ರಯಾಣಿಕರ ಹಕ್ಕನ್ನು ರಕ್ಷಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News