ಪಾಕ್ ಸೇನೆಯಿಂದ ಕದನವಿರಾಮ ಉಲ್ಲಂಘನೆ: 8 ತಿಂಗಳ ಮಗು ಮೃತ್ಯು

Update: 2018-05-22 07:00 GMT

ಜಮ್ಮು ಕಾಶ್ಮೀರ, ಮೇ 22: ಇಲ್ಲಿನ ಅಖ್ನೂರ್ ನ ಕೇರಿ ಬಟ್ಟಲ್ ನಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, 8 ತಿಂಗಳ ಮಗುವೊಂದು ಮೃತಪಟ್ಟಿದೆ.

ಪಲ್ಲನ್ವಾಲ ಸೆಕ್ಟರ್ ನಲ್ಲಿರುವ ಮನೆಯಲ್ಲಿ ತನ್ನ ಹೆತ್ತವರ ಜೊತೆ ಮನೆಯ ಹೊರಗೆ ಮಗು ಮಲಗಿತ್ತು. ಈ ಸಂದರ್ಭ ಪಾಕ್ ಸೇನೆ ನಡೆಸಿದ ದಾಳಿಯಲ್ಲಿ ಗುಂಡು ಮಗುವಿಗೆ ತಗಲಿದೆ.

ಇದಕ್ಕೂ ಮೊದಲು ಗಡಿಯುದ್ದಕ್ಕೂ ಪಾಕ್ ಸೇನೆ ಗುಂಡಿನ ದಾಳಿ ನಡೆಸಿತ್ತು. ಪಾಕ್ ಸೇನೆಯ ಕದನವಿರಾಮ ಉಲ್ಲಂಘನೆಯಿಂದಾಗಿ ಆರ್ನಿಯಾ ಸೆಕ್ಟರ್ ನ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News