ಬಿಎಎಂ ಆಸ್ಪತ್ರೆಗೆ ಧನ ಸಹಾಯಕ್ಕಾಗಿ ಮನವಿ
ಬೆಂಗಳೂರು, ಮೇ 22: ಮೈಸೂರಿನ ಬಿ.ಎ.ಎಂ(ಬೀಬಿ ಆಯಿಷಾ ಮಿಲ್ಲಿ) ಆಸ್ಪತ್ರೆ ವತಿಯಿಂದ ರಾಜ್ಯ ವಕ್ಫ್ ಕೌನ್ಸಿಲ್, ರಾಜ್ಯ ವಕ್ಫ್ ಫೌಂಡೇಶನ್ ಮತ್ತು ಎಂ.ಕೆ.ಆಗ್ರೋಟೆಕ್(ಸನ್‌ಪ್ಯೂರ್ ಆಯಿಲ್) ಸಹಯೋಗದೊಂದಿಗೆ ಪ್ರತಿ ತಿಂಗಳು 400 ರಿಂದ 500 ಜನರಿಗೆ ಉಚಿತವಾಗಿ ಡಯಾಲಿಸಿಸ್ ನಡೆಸಲಾಗುತ್ತಿದೆ. ಇದರ ಜೊತೆಗೆ ಬಿ.ಎ.ಎಂ.ಆಸ್ಪತ್ರೆ ವತಿಯಿಂದ ರಂಝಾನ್ ಪ್ರಯುಕ್ತ ಮೇ 17ರಿಂದ ಜೂ.16ರವರೆಗೆ ಡಯಾಲಿಸಿಸ್ ರೋಗಿಗಳಿಗೆ ಉಚಿತವಾಗಿ ಚುಚ್ಚುಮದ್ದು ಮತ್ತು ಔಷಧಿಗಳನ್ನು ನೀಡಲಾಗುತ್ತದೆ.
ಆದುದರಿಂದ, ಜಾತಿ ಧರ್ಮವೆಂಬ ಭೇದವಿಲ್ಲದೆ ಹಳೆಯ ಮತ್ತು ಹೊಸ ರೋಗಿಗಳು ಈ ಸದವಕಾಶವನ್ನು ಉಪಯೋಗಿಸಿಕೊಳ್ಳಲು ಕೋರಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಇನ್ನೂ 13 ಡಯಾಲಿಸಿಸ್ ಯಂತ್ರಗಳನ್ನು ಖರೀದಿಸಿ, ಪ್ರತಿ ತಿಂಗಳು ಸುಮಾರು 2 ಸಾವಿರ ಜನರಿಗೆ ಡಯಾಲಿಸಿಸ್ ನಡೆಸಲು ಉದ್ದೇಶಿಸಲಾಗಿದೆ. ಆದುದರಿಂದ, ಡೊನೇಷನ್ ಅಥವಾ ಝಕಾತ್ ರೂಪದಲ್ಲಿ ತಮ್ಮಿಂದ ಧನಸಹಾಯ ಕೋರುತ್ತೇವೆ ಎಂದು ಆಸ್ಪತ್ರೆಯ ಅಧ್ಯಕ್ಷರು ಮನವಿ ಮಾಡಿದ್ದಾರೆ.
ದಾನಿಗಳು ಝಕಾತ್ ಮತ್ತು ಸದಕಾ ಸಹಾಯಧನ ರೂಪದಲ್ಲಿ ಈ ಸತ್ಕಾರ್ಯಕ್ಕೆ ಸಂತ ಫಿಲೋಮಿನಾಸ್ ಕಾಲೇಜು ಆವರಣದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಶಾಖೆ(ಎಸ್‌ಪಿಸಿಸಿ ಬ್ರಾಂಚ್)ಯಲ್ಲಿ ಝಕಾತ್ ಖಾತೆ ಸಂಖ್ಯೆ: 1719101 0000818, ಡೊನೇಷನ್ ಖಾತೆ ಸಂಖ್ಯೆ: 171911010000803, IFS Code: SYNB0001719 ಗೆ ಜಮಾ ಮಾಡಬಹುದಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.