ಮುಖ್ಯಮಂತ್ರಿಯಾಗಿ ಎಚ್.ಡಿ.ಕೆ ಪ್ರಮಾಣ ವಚನ ಸ್ವೀಕಾರ: ಬೆಂಗಳೂರಿನ ವಿವಿಧೆಡೆ ವಾಹನ ಸಂಚಾರ ಬದಲು

Update: 2018-05-22 16:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 22: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆ ವಿಧಾನಸೌಧದ ಪೂರ್ವದ್ವಾರದಲ್ಲಿ ಸಮಾರಂಭ ಏರ್ಪಡಿಸಿದ್ದು, ನಗರದ ವಿವಿಧೆಡೆ ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.

ಮಾರ್ಗ ಬದಲು: ಡಾ.ಅಂಬೇಡ್ಕರ್ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಬಾಳೇಕುಂದ್ರಿ ವೃತ್ತದಲ್ಲಿ ನಿರ್ಬಂಧಿಸಲಾಗಿದ್ದು, ಈ ಮಾರ್ಗದಲ್ಲಿ ಚಲಿಸುವ ವಾಹನಗಳು ಟ್ರಾಫಿಕ್ ಹೆಡ್‌ಕ್ವಾರ್ಟರ್ ಪಟ್ಟಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ರಾಜಭವನ ರಸ್ತೆ, ಪೊಲೀಸ್ ತಿಮ್ಮಯ್ಯ ವೃತ್ತ, ರಾಜಭವನ ಜಂಕ್ಷನ್, ಚಾಲುಕ್ಯ ವೃತ್ತದ ಬಳಿ ಎಡತಿರುವು ಪಡೆದು ಪ್ಯಾಲೇಸ್ ರಸ್ತೆ ಸಿಐಡಿ ಜಂಕ್ಷನ್, ಮಹಾರಾಣಿ ಮೇಲ್ಸೇತುವೆ, ಕೆ.ಆರ್ ವೃತ್ತದ ಮೂಲಕ ಸಂಚರಿಸಬಹುದಾಗಿದೆ.

ಶೇಷಾದ್ರಿ ರಸ್ತೆ ಮತ್ತು ಹಳೇ ಅಂಚೆ ಕಚೇರಿ ರಸ್ತೆಯಿಂದ ಕೆ.ಆರ್ ವೃತ್ತದ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಕೆ.ಆರ್ ವೃತ್ತದ ಬಳಿ ನಿರ್ಬಂಧಿಸಿದ್ದು, ನೃಪತುಂಗ ರಸ್ತೆ ಮೂಲಕ ಸಂಚರಿಸಬಹುದಾಗಿದೆ.

ಶೇಷಾದ್ರಿ ರಸ್ತೆ ಮತ್ತು ಹಳೇ ಅಂಚೆ ಕಚೇರಿ ರಸ್ತೆಯಿಂದ ಕೆ.ಆರ್ ವೃತ್ತದ ಮಾರ್ಗದಲ್ಲಿ ಸಂಚರಿಸುವ ಕಾರು ಮತ್ತು ದ್ವಿಚಕ್ರವಾಹನಗಳು ಗೋಪಾಲಗೌಡ ವೃತ್ತದವರೆಗೆ ಸಂಚರಿಸಬಹುದು. ಜೊತೆಗೆ ಎಂ.ಎಸ್.ಬಿಲ್ಡಿಂಗ್, ಹೈಕೋರ್ಟ್ ಹಾಗೂ ಕಬ್ಬನ್‌ಪಾರ್ಕ್‌ನ ಒಳಭಾಗದ ರಸ್ತೆಗಳಲ್ಲಿ ಸಾಗಬಹುದು.

ಹೊರ ಜಿಲ್ಲೆಗಳು: ಮೈಸೂರು ಮಾರ್ಗದ ಕಡೆಯಿಂದ ಬರುವ ಬಸ್ಸು, ಇತರೆ ವಾಹನಗಳು ಒಳಗೊಂಡಂತೆ ಮೈಸೂರು ರಸ್ತೆ ಮೇಲ್ಸೇತುವೆ ಮೂಲಕ ಸಾಗಿ ಹಡ್ಸನ್ ವೃತ್ತ, ಕಸ್ತೂರಬಾ ರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸಬಹುದಾಗಿದೆ.

ಕನಕಪುರ ರಸ್ತೆ ಮಾರ್ಗವಾಗಿ ಬರುವ ವಾಹನಗಳು ಬನಶಂಕರಿ ದೇವಸ್ಥಾನದ ಬಳಿ ಬಲತಿರುವು ಪಡೆದು ಜಯನಗರ ಸೌತೆಂಡ್ ವೃತ್ತ, ಲಾಲ್‌ಬಾಗ್ ಪಶ್ಚಿಮ ದ್ವಾರ, ಮಿನರ್ವ ವೃತ್ತ, ಟೌನ್‌ಹಾಲ್ ಮೂಲಕ ಸಾಗಿ ಹಡ್ಸನ್ ವೃತ್ತ, ಕಸ್ತೂರಬಾ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.

ನಂತರ ಮೈಸೂರು, ಕನಕಪುರ ಮಾರ್ಗದ ವಾಹನಗಳು ಕ್ವೀನ್ಸ್‌ರಸ್ತೆ ಮೂಲಕ ಸಂಚರಿಸಿ ಮಣಿಪಾಲ್ ಸೆಂಟರ್, ತಿರುವಳ್ಳವರ್ ಪ್ರತಿಮೆ, ಕೋಲ್ಸ್‌ಪಾರ್ಕ್, ಜಯಮಹಲ್ ರಸ್ತೆ ಮೂಲಕ ಸಾಗಿ ಸರ್ಕಸ್ ಮೈದಾನ ಹಾಗೂ ಅಮಾನುಲ್ಲಾ ಖಾನ್ ರಸ್ತೆ ಮೂಲಕ ಕೃಷ್ಣವಿಹಾರ್ ಆವರಣದಲ್ಲಿ ನಿಲುಗಡೆ ಮಾಡಬಹುದಾಗಿದೆ.

ತುಮಕೂರು ರಸ್ತೆಯಿಂದ ಬಸ್‌ಗಳು ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಬಿಇಎಲ್ ಸರ್ಕಲ್, ಹೆಬ್ಬಾಳ ಮೇಲುಸೇತುವೆ ಮೂಲಕ ಕಾವೇರಿ ಜಂಕ್ಷನ್, ವಿಂಡ್ಸನ್ ಮ್ಯಾನರ್ ಮೂಲಕ ಸಾಗಿ, ಪಿ.ಎಸ್ ಜಂಕ್ಷನ್ ಎಡ ಭಾಗದಲ್ಲಿ ಜನರನ್ನು ಇಳಿಸಬಹುದಾಗಿದೆ.

ಬಳ್ಳಾರಿ ರಸ್ತೆ, ದೊಡ್ಡಬಳ್ಳಾಪುರ, ದೇವನಹಳ್ಳಿ ರಸ್ತೆ ಕಡೆಯಿಂದ ಬರುವ ವಾಹನಗಳು ಕೊಡಿಗೇಹಳ್ಳಿ ಗೇಟ್, ಹೆಬ್ಬಾಳ ಮೇಲುಸೇತುವೆ, ವಿಂಡ್ಸನ್ ಮ್ಯಾನರ್, ಮೂಲಕ ಸಾಗಿ ಪಿ.ಎಸ್ ಜಂಕ್ಷನ್ ಎಡ ಭಾಗದಲ್ಲಿ ಜನರನ್ನು ಇಳಿಸಬಹುದಾಗಿದೆ.

ಕೋಲಾರ, ಕೆಜಿಎಫ್ ಕಡೆಯಿಂದ ಬರುವ ವಾಹನಗಳು ಹಳೇ ಮದ್ರಾಸ್ ರಸ್ತೆ, ರಾಮಮೂರ್ತಿನಗರ ಹೊರ ವರ್ತುಲರಸ್ತೆ, ನಾಗವಾರ ಮೂಲಕ ಸಂಚರಿಸಿ ಹೆಬ್ಬಾಳ ಮೇಲುಸೇತುವೆ ಮೂಲಕ ಕಾವೇರಿ ಜಂಕ್ಷನ್, ವಿಂಡ್ಸನ್ ಮ್ಯಾನರ್, ಮೂಲಕ ಸಾಗಿ ಪಿ.ಎಸ್ ಜಂಕ್ಷನ್ ಎಡ ಭಾಗದಲ್ಲಿ ಜನರನ್ನು ಇಳಿಸಬಹುದಾಗಿದೆ.

ಇನ್ನು, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ದೊಡ್ಡಬಳ್ಳಾಪುರ, ದೇವನಹಳ್ಳಿ ರಸ್ತೆ, ಕೋಲಾರ, ಕೆಜಿಎಫ್ ಕಡೆಯಿಂದ ಬಂದವಾಹನಗಳು ಪಿ.ಎಸ್. ಜಂಕ್ಷನ್ ಬಳಿ ಜನರನ್ನು ಇಳಿಸಿದ ಬಳಿಕ ಅವಿನಾಶ್ ಪೆಟ್ರೋಲ್ ಬಂಕ್, ಚಂದ್ರಿಕಾ ಜಂಕ್ಷನ್ ಮೂಲಕ ಸಂಚರಿಸಿ ಉದಯ ಟಿವಿ ಜಂಕ್ಷನ್, ಕಂಟೋನ್‌ಮೆಂಟ್, ಅಂಡರ್‌ಪಾಸ್, ಜಯಮಹಲ್ ರಸ್ತೆ ಮೂಲಕ ಸಾಗಿ ಸರ್ಕಸ್ ಮೈದಾನ ಹಾಗೂ ಅಮಾನುಲ್ಲಾ ಖಾನ್ ರಸ್ತೆ ಮೂಲಕ ಕೃಷ್ಣವಿಹಾರ್ ಆವರಣದಲ್ಲಿ ನಿಲುಗಡೆ ಮಾಡಬಹುದಾಗಿದೆ.

ಎಲ್ಲ ವಾಹನ ನಿಲುಗಡೆ ನಿಷೇಧ: ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕೆಆರ್ ವತ್ತದವರೆಗೆ ರಸ್ತೆಯ ಎರಡು ಬದಿಗಳಲ್ಲಿ ರಾಜಭವನ ರಸ್ತೆ ಸಿಟಿಒ ವೃತ್ತದಿಂದ ರಾಜಭವನ ಜಂಕ್ಷನ್. ಎಚ್‌ಎಎಲ್ ರಸ್ತೆ, ರಾಜಭವನ ಜಂಕ್ಷನ್‌ನಿಂದ ಚಾಲುಕ್ಯ ವೃತ್ತದ ವರೆಗೆ. ಕ್ವೀನ್ಸ್‌ರಸ್ತೆ, ತಿಮ್ಮಯ್ಯ ಜಂಕ್ಷನ್, ಕ್ವೀನ್ಸ್ ವೃತ್ತ, ಶೇಷಾದ್ರಿ ರಸ್ತೆ ಕೆ.ಆರ್ ವೃತ್ತದಿಂದ ಆನಂದರಾವ್ ವೃತ್ತದವರೆಗೆ. ಪ್ಯಾಲೇಸ್ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ಕೆಳಸೇತುವೆವರೆಗೆ.

ದೇವರಾಜ ಅರಸ್ ರಸ್ತೆ, ಚಾಲುಕ್ಯ ವೃತ್ತದಿಂದ ಎಂ.ಎಸ್ ಬಿಲ್ಡಿಂಗ್ ಒಳಭಾಗದವರೆಗೆ ರೇಸ್‌ಕೋರ್ಸ್ ರಸ್ತೆ, ಟ್ರಿಲೈಟ್ ಜಂಕ್ಷನ್‌ನಿಂದ ಚಾಲುಕ್ಯ ವೃತ್ತದವರೆಗೆ. ಪಾರ್ಕ್‌ಹೌಸ್ ರಸ್ತೆ, ಎನ್.ಜಿ.ಎಸ್. ಜಂಕ್ಷನ್‌ನಿಂದ ಸಿಐಡಿ ವತ್ತದವರೆಗೆ. ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು, ಮಿಲ್ಲರ್‌ರಸ್ತೆ, ಎಲ್ಆರ್‌ಡಿಇ ಜಂಕ್ಷನ್, ಬಸವೇಶ್ವರ ವೃತ್ತದವರೆಗೆ. ಇನ್‌ಫೆಂಟ್ರಿ ರಸ್ತೆ, ಅಲಿ ಅಸ್ಕರ್ ರಸ್ತೆ, ಟ್ರಾಫಿಕ್ ಹೆಡ್‌ಕ್ವಾರ್ಟರ್ ಜಂಕ್ಷನ್‌ವರೆಗೆ. ಅಲಿ ಅಸ್ಕರ್ ರಸ್ತೆ, ರಾಜಭವನ ಜಂಕ್ಷನ್‌ನಿಂದ ಅಲಿ ಅಸ್ಕರ್ ಕ್ರಾಸ್‌ವರೆಗೆ. ಕೆಜಿ ರಸ್ತೆ ಪೊಲೀಸ್ ಕಾರ್ನರ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ.

ಹಳೇ ಅಂಚೆ ಕಚೇರಿ ರಸ್ತೆ ಮೈಸೂರು ಬ್ಯಾಂಕ್ ವೃತ್ತದಿಂದ ಕೆಆರ್ ವೃತ್ತದವರೆಗೆ ನೃಪತುಂಗ ರಸ್ತೆ, ಕೆಆರ್ ವೃತ್ತದಿಂದ ಪೊಲೀಸ್ ಕಾರ್ನರ್‌ವರೆಗೆ. ಎನ್.ಆರ್. ರಸ್ತೆ ರಸ್ತೆ, ಹಡ್ಸನ್ ವೃತ್ತದಿಂದ ಎಸ್.ಜೆ.ಪಿ ರಸ್ತೆ, ಮೈಸೂರು ಕೆಳಸೇತುವೆಯಿಂದ ಟೌನ್‌ಹಾಲ್‌ವರೆಗೆ.

ಕಾಳಿಂಗರಾವ್ ರಸ್ತೆ ಎನ್‌ಆರ್ ಜಂಕ್ಷನ್‌ನಿಂದ ಸುಬ್ಬಯ್ಯ ವೃತ್ತದವರೆಗೆ. ಕಸ್ತೂರಬಾ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ. ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್‌ಆರ್‌ಎಂಆರ್ ಜಂಕ್ಷನ್‌ನಿಂದ ಹಡ್ಸನ್ ವೃತ್ತದವರೆಗೆ. ಕಬ್ಬನ್‌ರಸ್ತೆ ಸಿಟಿಒ ವೃತ್ತದಿಂದ ಮಣಿಪಾಲ್ ಸೆಂಟರ್‌ವರೆಗೆ ಸೆಂಟ್ರಲ್ ಸ್ಟ್ರೀಟ್ ಅನಿಲ್ ಕುಂಬ್ಳೆ ವೃತ್ತದಿಂದ ಬಿಆರ್‌ವಿ ಜಂಕ್ಷನ್‌ವರೆಗೆ. ಟಿ.ಚೌಡಯ್ಯ ರಸ್ತೆ ಹಳೆ ಹೈಗ್ರೌಂಡ್ ಜಂಕ್ಷನ್ ನಿಂದ ಕಾವೇರಿ ಜಂಕ್ಷನ್‌ವರೆಗೆ ರಮಣಮಹರ್ಷಿ ರಸ್ತೆ ಕಾವೇರಿ ಜಂಕ್ಷನ್‌ನಿಂದ ಮೇಕ್ರಿ ವೃತ್ತದವರೆಗೆ. ಸರ್ ಸಿ.ವಿರಾಮನ್ ರಸ್ತೆ ಮೇಕ್ರಿ ವತ್ತದಿಂದ ಬಿಎಚ್‌ಇಎಲ್ ವೃತ್ತದವರೆಗೆ. ಜಯ ಜಯಮಹಲ್ ರಸ್ತೆ ಮತ್ತು ಬಳ್ಳಾರಿ ರಸ್ತೆವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ದ್ವಿಚಕ್ರವಾಹನ ಕಾರು ನಿಲುಗಡೆ: ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳ ವಾಹನಗಳನ್ನು ದೇವರಾಜ ಅರಸು ರಸ್ತೆಯ ಮಾಹಿತಿಸೌಧ ಮುಭಾಗದ ಗೇಟ್ ನಂ.2ರ ಮೂಲಕ ಪ್ರವೇಶಿಸಿ, ವಿಕಾಸಸೌಧ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಬಹುದಾಗಿದೆ.

ಮಾಧ್ಯಮ ಸಿಬ್ಬಂದಿ ವಾಹನ ಹಾಗೂ ಒಬಿ ವಾಹನಗಳನ್ನು ದೇವರಾಜ ಅರಸು ರಸ್ತೆಯ ಮಾಹಿತಿಸೌಧ ಮುಂಭಾಗದ ಗೇಟ್ ನಂ.2ರ ಬಳಿ ಪ್ರವೇಶಿಸಿ ವಿಧಾನಸೌಧದ ದಕ್ಷಿಣದ್ವಾರ ವಿಕಾಸಸೌಧದ ಪೂರ್ವ ದ್ವಾರದ ಬಳಿ ನಿಲುಗಡೆ ಮಾಡಬಹುದಾಗಿದೆ.

ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಮಲ್ಯ ಆಸ್ಪತ್ರೆ ರಸ್ತೆ, ಕಂಠೀರವ ಕ್ರೀಡಾಂಗಣ, ಯುಬಿ ಸಿಟಿ ಪಾವತಿ ಮತ್ತು ನಿಲುಗಡೆ ಸ್ಥಳ, ಸೆಂಟ್ರಲ್ ಕಾಲೇಜಿನ ಆವರಣ, ಫ್ರೀಡಂಪಾರ್ಕ್ ಆವರಣ, ಸರಕಾರಿ ಕಲಾ ಕಾಲೇಜು, ಹಳೇ ಅಂಚೆ ಕಚೇರಿ ರಸ್ತೆ, ಟಿ.ಚೌಡಯ್ಯ ರಸ್ತೆ, ಎಲ್‌ಆರ್‌ಡಿಇ ಜಂಕ್ಷನ್‌ನಿಂದ ರಾಜಭವನ ಜಂಕ್ಷನ್‌ವರೆಗೆ ವಾಹನ ನಿಲುಗಡೆಗೆ ಅವಕಾಶವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News