ಧೋನಿ ಎದುರು ಡ್ಯಾನ್ಸ್ ಮಾಡಿ ಸಂಭ್ರಮಪಟ್ಟ ಬ್ರಾವೊ

Update: 2018-05-23 06:36 GMT

ಮುಂಬೈ, ಮೇ 23: ಐಪಿಎಲ್ ಕ್ವಾಲಿಫೈಯರ್-1ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ಗೆ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಎಂ.ಎಸ್. ಧೋನಿ ಬಳಗ ಏಳನೇ ಬಾರಿ ಐಪಿಎಲ್‌ನ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಡ್ರೆಸ್ಸಿಂಗ್‌ರೂಮ್‌ನಲ್ಲಿ ನಾಯಕ ಎಂ.ಎಸ್. ಧೋನಿಯ ಎದುರು ಡ್ಯಾನ್ಸ್ ಮಾಡುವ ಮೂಲಕ ಆಲ್‌ರೌಂಡರ್ ಡ್ವೇಯ್ನ್ ಬ್ರಾವೊ ಚೆನ್ನೈ ಫೈನಲ್ ತಲುಪಿದ ಸಂಭ್ರಮವನ್ನು ಆಚರಿಸಿದರು.

ಬ್ರಾವೋ ಡ್ಯಾನ್ಸ್ ಮಾಡುವ ದೃಶ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಟ್ವಿಟರ್‌ನಲ್ಲಿ ಹಾಕಲಾಗಿದೆ. ಈ ದೃಶ್ಯದಲ್ಲಿ ನಾಯಕ ಧೋನಿಯ ಎದುರು ಬ್ರಾವೋ ಹಾಗೂ ಹರ್ಭಜನ್ ಸಿಂಗ್ ಡ್ಯಾನ್ಸ್ ಮಾಡುತ್ತಿರುವುದು ಕಂಡುಬರುತ್ತಿದೆ. ಧೋನಿ ಈ ವರ್ಷದ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 15 ಪಂದ್ಯಗಳಲ್ಲಿ ಆಡಿರುವ ಧೋನಿ 75.83ರ ಸರಾಸರಿಯಲ್ಲಿ ಒಟ್ಟು 455 ರನ್ ಗಳಿಸಿದ್ದಾರೆ.

 ಗೆಲ್ಲಲು 140 ರನ್ ಗುರಿ ಪಡೆದಿದ್ದ ಚೆನ್ನೈ ನಿರಂತರ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ತಂಡಕ್ಕೆ ಆಸರೆಯಾಗಿ ನಿಂತ ಎಫ್‌ಡು ಪ್ಲೆಸಿಸ್ ಔಟಾಗದೆ 67 ರನ್ ಗಳಿಸಿ ತಂಡಕ್ಕೆ ರೋಚಕ ಗೆಲುವು ತಂದರು.

ಎರಡು ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಆಡುತ್ತಿರುವ ಚೆನ್ನೈಗೆ ಈ ಗೆಲುವು ಹೆಚ್ಚು ವಿಶೇಷವಾಗಿದೆ. ಟೂರ್ನಿಯ ಲೀಗ್ ಹಂತದಲ್ಲಿ ಪ್ರಾಬಲ್ಯ ಮೆರೆದಿದ್ದ ಚೆನ್ನೈ 14 ಪಂದ್ಯಗಳಲ್ಲಿ 18 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News