ಶ್ಯಾಮಲಾ ರಂಗನಾಥ್

Update: 2018-05-26 14:30 GMT

ಜಯಪುರ, ಮೇ 26 ಇಲ್ಲಿಗೆ ಸಮೀಪದ ರಾಂಪಾಲ್ ಎಸ್ಟೇಟಿನ ಮಾಲಿಕ ರಂಗನಾಥ್‍ರವರ ಪತ್ನಿ ಶ್ಯಾಮಲಾ ರಂಗನಾಥ್ (53) ಶುಕ್ರವಾರ ರಾತ್ರಿ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನಿಧನರಾದರು. 

ಅವರು ಪತಿ, ಪುತ್ರ ಹಾಗೂ ಪುತ್ರಿ ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರು ಜಯಪುರ ಸಾನಿಧ್ಯ ವೇದಿಕೆ ಹಾಗೂ ಗಾಯತ್ರಿ ಸ್ನೇಹಕೂಟದ ಸ್ಥಾಪಕ ಅಧ್ಯಕ್ಷರಾಗಿ, ಮೇಗುಂದಾ ಹೋಬಳಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ, ಕೂಟ ಮಹಾಜಗತ್ತಿನ ಮಹಿಳಾ ವಿಭಾಗದ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. 

ಜನಸಾಮಾನ್ಯರೊಂದಿಗೆ ಪ್ರೀತಿಯಿಂದ ಬೆರೆತು ಅಸಹಾಯಕರು, ಅಶಕ್ತರು ಹಾಗೂ ಬಡಕುಟುಂಬಗಳಿಗೆ ಕೈಲಾದ ಸಹಾಯ ನೀಡುತ್ತಿದ್ದ ಇವರು ಸಮಾಜಮುಖಿ ಚಿಂತನೆ ಸಂಘಟಕರು. ವಿಪ್ರ ಬ್ರಾಹ್ಮಣ ಸಭಾ ಸಂಘಟನೆಯನ್ನು ಮೇಗುಂದಾ ಹೋಬಳಿಯಲ್ಲಿ ಬಲಪಡಿಸಿ, ಬೆಳೆಸಿ ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೆಗ್ಗಳಿಕೆ ಇವರದ್ದು. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದು, ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಇವರದ್ದು ಪ್ರಮುಖ ಪಾತ್ರ. ಇವರ ಅಂತ್ಯಕ್ರಿಯೆಯು ಸ್ವಗೃಹದ ಸಮೀಪ ಎಸ್ಟೇಟಿನಲ್ಲಿ ನಾಳೆ ನಡೆಯಲಿದೆ. ಪತ್ರಕರ್ತ ಶಂ.ನ ಶೇಷಗಿರಿ, ಬ್ರಾಹ್ಮಣ ಮಹಾಸಭಾ, ಹೆಬ್ಬಾರ್ ಬ್ರಾಹ್ಮಣ ಸಭಾ ಮುನಿವೃಂದಪುರ ಘಟಕ ಹಾಗೂ ಕೂಟ ಮಹಾಜಗತ್ತಿನ ಮಹಿಳಾ ವಿಭಾಗದ ಸದಸ್ಯರು ಇವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ