ಎಬಿಡಿ ವಿಲಿಯರ್ಸ್‌ಗೆ ವಿರಾಟ್ ಕೊಹ್ಲಿ ವಿದಾಯ

Update: 2018-05-26 18:46 GMT

ಹೊಸದಿಲ್ಲಿ, ಮೇ 26: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರನೆ ನಿವೃತ್ತಿಯಾಗಿರುವ ದಕ್ಷಿಣ ಆಫ್ರಿಕದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್‌ಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ವಿದಾಯ ಕೋರಿ ಬೀಳ್ಕೊಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರನನ್ನು ಶ್ಲಾಘಿಸಿದ ಕೊಹ್ಲಿ ಶುಭಹಾರೈಸಿದ್ದಾರೆ.

‘‘ನನ್ನ ಸಹೋದರನಿಗೆ ಶುಭಾಶಯಗಳು. ನೀವು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಶೈಲಿಗೆ ರೂಪ ನೀಡಿದ್ದೀರಿ. ನಿಮಗೆ ಹಾಗೂ ನಿಮ್ಮ ಕುಟುಂಬ ಸದಸ್ಯರಿಗೆ ಶುಭ ಹಾರೈಸುವೆ. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ’’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಸಮಕಾಲೀನ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಡಿವಿಲಿಯರ್ಸ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. 14 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದ ಡಿವಿಲಿಯರ್ಸ್ ತನ್ನಲ್ಲಿ ಕ್ರಿಕೆಟ್ ಎಂಬ ಇಂಧನ ಖಾಲಿಯಾಗಿದೆ ಎಂದು ಹೇಳಿದ್ದರು. ಡಿವಿಲಿಯರ್ಸ್ 114 ಟೆಸ್ಟ್ ಪಂದ್ಯಗಳಲ್ಲಿ 22 ಶತಕಗಳ ಸಹಿತ 8,765 ರನ್, 228 ಏಕದಿನಗಳಲ್ಲಿ 25 ಶತಕಗಳ ಸಹಿತ 9,577 ರನ್ ಹಾಗೂ 78 ಟ್ವೆಂಟಿ-20 ಪಂದ್ಯಗಳಲ್ಲಿ 10 ಅರ್ಧಶತಕಗಳನ್ನೊಳಗೊಂಡ 1,672 ರನ್ ಕಲೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News