ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಿಗೆ ಹೆಚ್ಚಿದ ಬೇಡಿಕೆ

Update: 2018-05-28 18:04 GMT

ಬೆಂಗಳೂರು, ಮೇ 28: ದೇಶದಾದ್ಯಂತ ಎಂಜಿನಿಯರಿಂಗ್ ಮಾಡಬಯಸುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟದಲ್ಲಿ ಶಿಕ್ಷಣ ಪಡೆಯಲು ಒಲವು ತೋರುತ್ತಿದ್ದಾರೆ.

ಕಾಮೆಡ್-ಕೆ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ದುರ್ಬಾ ಆದಿತ್ಯ ಪ್ರಥಮ ರ್ಯಾಂಕ್ ಹಾಗೂ ಹತ್ತು ಪ್ರಥಮ ರ್ಯಾಂಕ್‌ಗಳಲ್ಲಿ ನಾಲ್ಕು ಜನರು ಕರ್ನಾಟಕದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಇಚ್ಛಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಾಮೆಡ್-ಕೆ ಪರೀಕ್ಷೆಯಲ್ಲಿ 100 ರ್ಯಾಂಕ್ ಪಡೆದವರ ಪಟ್ಟಿಯಲ್ಲಿ ರಾಜ್ಯದ 42 ವಿದ್ಯಾರ್ಥಿಗಳಿದ್ದಾರೆ. ಮೇ 13 ರಂದು 62 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದೇಶದ 137 ನಗರಗಳಲ್ಲಿ, 291 ಪರೀಕ್ಷಾ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News