×
Ad

‘ಕಾಲಾ’ ಸಿನೆಮಾ ಬಿಡುಗಡೆಗೆ ತಡೆ: ಸಾ.ರಾ.ಗೋವಿಂದ್

Update: 2018-05-29 19:57 IST

ಬೆಂಗಳೂರು, ಮೇ 29: ಕಾವೇರಿ ವಿಚಾರದಲ್ಲಿ ತಮಿಳರಪರ ವಕಾಲತ್ತು ವಹಿಸಿರುವ ನಟ ರಜನಿಕಾಂತ್ ಅಭಿನಯದ ‘ಕಾಲಾ’ ಸಿನೆಮಾವನ್ನು ಜೂ.7ರಂದು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲವೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿನೆಮಾ ವಿತರಕರಿಗೆ ಈಗಾಗಲೆ ಕಾಲಾ ಚಿತ್ರದ ಹಕ್ಕುಗಳನ್ನು ಖರೀದಿಸದಂತೆ ಸೂಚಿಸಿದ್ದೇವೆ. ಕೆಎಫ್‌ಸಿಸಿ ಅಧ್ಯಕ್ಷರಾಗಿ ತಾವು ಈ ಫರ್ಮಾನು ಹೊರಡಿಸಿಲ್ಲ. ರಾಜ್ಯದ ಹೆಮ್ಮೆಯ ಕನ್ನಡಿಗನಾಗಿ, ಕನ್ನಡಪರ ಚಳುವಳಿಗಾರನಾಗಿ ಅವರಿಗೆ ಸೂಚಿಸಿದ್ದೇನೆ ಎಂದರು. ಕಾಲಾ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಹಲವಾರು ಕನ್ನಡಪರ ಸಂಘಟನೆಗಳು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿವೆ. ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಕಾಲಾ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುತ್ತಿಲ್ಲ. ಈ ಬಗ್ಗೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಜತೆಗೂ ಚರ್ಚಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News