ಆರ್‌ಟಿಇ ಕಾಯ್ದೆ ಉಲ್ಲಂಘನೆ ಪ್ರಕರಣ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದೂರು ದಾಖಲು

Update: 2018-05-29 17:44 GMT

ಬೆಂಗಳೂರು, ಮೇ 29: ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘನೆ ಪ್ರಕರಣಗಳ ಸಂಬಂಧ ರಾಜ್ಯ  ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದೂರುಗಳು ದಾಖಲಾಗುತ್ತಿವೆ.

  ಪ್ರತಿದಿನ ಆರ್‌ಟಿಇ ಸಂಬಂಧಿಸಿದ ಎರಡರಿಂದ ಮೂರು ದೂರುಗಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ದಾಖಲಾಗುತ್ತಿವೆ. ಮೊದಲ ಸುತ್ತಿನಲ್ಲಿ ಸೀಟು ಪಡೆದ ಮಕ್ಕಳನ್ನು ಸೇರಿಸಿಕೊಳ್ಳದಿರುವುದು ಹಾಗೂ ಕೆಲವೊಂದು ಶಾಲೆಗಳು ಒಂದೆ ಒಂದು ಮಗುವನ್ನು ದಾಖಲಿಸಿಕೊಳ್ಳದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.

ನಗರದ ಪ್ರತಿಷ್ಠಿತ ಶಾಲೆಯೊಂದು ಎಂಟು ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಹಂಚಿಕೆಯಾದ ಸೀಟು ನಿರಾಕರಿಸಿದ್ದು, ಪೋಷಕರು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಆಯೋಗದ ವತಿಯಿಂದ ವಿಚಾರಣೆ ನಡೆಸಿ, ಆರ್‌ಟಿಇಯಡಿಯಲ್ಲಿ ಮಕ್ಕಳನ್ನು ದಾಖಲಿಸುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಕೃಪಾ ಆಳ್ವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News