‘ತಂಬಾಕು ಸೇವನೆಯಿಂದ ಕೋಟ್ಯಂತರ ಜೀವ ಅಪಾಯದಂಚಿನಲ್ಲಿದೆ’
ಬೆಂಗಳೂರು, ಮೇ 30: ತಂಬಾಕು ಸೇವನೆ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯದ ಅಪಾಯಗಳಲ್ಲೊಂದಾಗಿದ್ದು, ಕೋಟ್ಯಂತರ ಜನರು ಅಪಾಯದ ಅಂಚಿನಲ್ಲಿದ್ದಾರೆ ಎಂದು ವೈದ್ಯರು ವಿಶ್ಲೇಷಿಸಿದ್ದಾರೆ.
ಧೂಮಪಾನದಿಂದಾಗಿ ಪ್ರತಿವರ್ಷ 6 ದಶಲಕ್ಷ ಜನರು ಪ್ರಾಣ ತ್ಯಜಿಸುತ್ತಿದ್ದಾರೆ. ಅಲ್ಲದೆ, ತಮ್ಮದಲ್ಲದ ತಪ್ಪಿನಿಂದಾಗಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೂ, ಜನರು ಧೂಮಪಾನ ಮಾಡುವುದನ್ನು ನಿಲ್ಲಿಸಿಲ್ಲ. 4 ಜನರಲ್ಲಿ ಒಬ್ಬರು ನಿರಂತರ ಧೂಮಪಾನಿಗಳು ಸಿಒಪಿಡಿ ಪಡೆಯುವ ಅಪಾಯವನ್ನು ಹೊಂದಿದ್ದಾರೆ. ಶೇ.40 ರಷ್ಟು ಧೂಮಪಾನಿಗಳು ದೀರ್ಘಕಾಲಿಕ ಬ್ರಾಂಖೈಟಿಸ್ ಪೀಡಿತರಾಗಿದ್ದು, ಅದರಲ್ಲಿ ಅರ್ಧದಷ್ಟು ಜನರು ಸಿಒಪಿಡಿಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಇಂದು ತಂಬಾಕು ಬಳಸುವವರಲ್ಲಿ ತಂಬಾಕಿನ ಹೊಗೆಯ ಸೇವೆನೆಯ ಪ್ರಮಾಣವು ಶೇ.35.1ರಷ್ಟಿದ್ದು, 7000ಕ್ಕೂ ಹೆಚ್ಚು ರಾಸಾಯನಿಕಗಳ ಅಪಾಯಕ್ಕೆ ಒಡ್ಡಿ, ಇವುಗಳಲ್ಲಿ 250 ಮತ್ತು ಸುಮಾರು 69 ರಾಸಾಯನಿಕಗಳು ಅನುಕ್ರಮವಾಗಿ ಅಪಾಯಕಾರಿ ಮತ್ತು ಕ್ಯಾನ್ಸರ್ ಕಾರಕವೆಂದು ಸಾಬೀತಾಗಿದೆ. ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಭಾರತದಲ್ಲಿ ಎಲ್ಲಾ ಕ್ಯಾನ್ಸರ್‌ಗಳಿಗಿಂತ ಶೇ.30 ಕ್ಕೂ ಹೆಚ್ಚು ಪ್ರಮಾಣವನ್ನು ಹೊಂದಿದೆ ಎಂದು ಹೇಳಲಾಗಿದೆ.
ವೈದ್ಯ ಡಾ.ಬಿ.ಮುರಳಿ ಮೋಹನ್ ಪ್ರಕಾರ, ನಿಕೋಟಿನ್‌ಗೆ ದೈಹಿಕ ವ್ಯಸನದಿಂದಾಗಿ ಧೂಮಪಾನವನ್ನು ಬಿಡುವುದು ಕಷ್ಟಕರವಾಗಿದ್ದು, ಬಲವಾದ ದೈಹಿಕ ಹಂಬಲವನ್ನು ಪ್ರಚೋದಿಸುತ್ತದೆ. ಆದರೆ, ಈ ಲಕ್ಷಣಗಳನ್ನು ಮತ್ತು ಹಂಬಲವನ್ನು ನಿಯಂತ್ರಿಸಲು ಸಹಾಯಕವಾಗುವ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿದ್ದು, ಅದರಿಂದ ಜೀವನದ ಗುಣಮಟ್ಟದಲ್ಲಿ ಮತ್ತು ದೈನಂದಿನ ಲಕ್ಷಣಗಳಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದ್ದಾರೆ.
ನಿರಂತರವಾಗಿ ಧೂಮಪಾನ ಮಾಡುವ ಸ್ತ್ರೀಯರು ಪುರುಷರಿಗೆ ಹೋಲಿಸಿದಂತೆ, ಅವರು ಸೇದುವ ಸಿಗರೆಟ್‌ಗಳಿಗೆ ಹೆಚ್ಚು ಬೇಗನೆ ತಮ್ಮ ಶ್ವಾಸಕೋಶದ ಕ್ರಿಯೆಗಳಲ್ಲಿ ಕ್ಷೀಣತೆ ಕಂಡು ಬರುತ್ತದೆ. ಆದರೆ, ಪುರುಷರಿಗೆ ಹೋಲಿಸಿದಂತೆ, ಅವರು ಧೂಮಪಾನ ನಿಲ್ಲಿಸಿದಾಗ, ಶ್ವಾಸಕೋಶದ ಕ್ರಿಯೆಯಲ್ಲಿ ಹೆಚ್ಚು ಲಾಭಗಳನ್ನೂ ಕಾಣುತ್ತಿದ್ದಾರೆ. ನಿಕೋಟಿನ್ ಬದಲಿ ಚಿಕಿತ್ಸೆಯು (ಎನ್‌ಆರ್‌ಟಿ) ಧೂಮಪಾನಿಗಳು ಧೂಮಪಾನವನ್ನು ತ್ಯಜಿಸಲು ಸಹಾಯಕವಾಗುವ ಪರಿಣಾಕಾರಿ ಚಿಕಿತ್ಸೆ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಹಳಷ್ಟು ಸಿಗರೆಟ್‌ಗಳಲ್ಲಿ ಕಂಡುಬರುವ ನಿಕೋಟಿನ್‌ನ 1/3 ಅಥವಾ ಅರ್ಧ ಪ್ರಮಾಣದ ನಿಕೋಟಿನ್ ಅದರಲ್ಲಿರುತ್ತದೆ. ಇದು ಒಂದು ಅತ್ಯುತ್ತಮ ಆಯ್ಕೆ ಮತ್ತು ಇದನ್ನು ಪ್ರೋ ಧೂಮಪಾನ ಮಾಡದೇ ನಿಮ್ಮ ರಕ್ತದಲ್ಲಿ ನಿಕೋಟಿನ್ ಅನ್ನು ಸೇರಿಸುವ ಒಂದು ವಿಧಾನವಾಗಿದೆ. ಅಲ್ಲದೆ, ಕೆಲವು ನಿಕೋಟಿನ್ ಗಂ, ಪ್ಯಾಚ್, ಇನ್ಹೇಲರ್ಸ್, ಟ್ಯಾಬ್ಲೆಟ್, ಕೊಜೆನ್ಜಸ್ ಮತ್ತು ಸ್ಪ್ರೇಗಳೂ ಸಿಗುತ್ತವೆ. ಬಹಳಷ್ಟು ವೈದ್ಯಕೀಯ ಪರೀಕ್ಷೆಗಳ ಪ್ರಕಾರ ನೆರವಿಲ್ಲದೆ ಧೂಮಪಾನಕ್ಕೆ ಹೋಲಿಸಿದಂತೆ ಎನ್‌ಆರ್‌ಟಿಯು ಧೂಮಪಾನವನ್ನು ತ್ಯಜಿಸುವ ಸಾಧ್ಯತೆಯನ್ನು ಶೇ.50-70ರಷ್ಟು ಹೆಚ್ಚಿಸುತ್ತದೆ.
ಶ್ವಾಸಕೋಶ ರೋಗ ಮತ್ತು ಕ್ಯಾನ್ಸರ್ ಸೇರಿದಂತೆ, ತಂಬಾಕು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಆರೋಗ್ಯದ ಮೇಲೆ ಧೂಮಪಾನದ ದುಷ್ಪರಿಣಾಮಗಳ ನಮ್ಮ ತಿಳುವಳಿಕೆ ಹೆಚ್ಚುತ್ತಿದ್ದಂತೆ ಈ ಆರೋಗ್ಯದ ಪರಿಣಾಮಗಳು ಅಮಾಯಕ ಸುತ್ತಮುತ್ತಲಿನವರಿಗೂ ವಿಸ್ತರಿಸಿದೆ. ಹೀಗಾಗಿ, ಧೂಮಪಾನವನ್ನು ತ್ಯಜಿಸಲು ಸಿದ್ದವಾಗಿದ್ದಲ್ಲಿ, ನಿಮ್ಮ ವೈದ್ಯರೊಂದಿಗೆ ಮಾತನಾಡಿ, ನಿಕೋಟಿನ್‌ನೊಂದಿಗಿನ ನಿಮ್ಮ ವ್ಯಸನವನ್ನು ಶಮನ ಮಾಡಿಕೊಳ್ಳಿ ಎಂದು ವೈದ್ಯ ಮುರಳಿ ಮೋಹನ್ ಸಲಹೆ ನೀಡಿದ್ದಾರೆ.