×
Ad

‘ಸರ್ಚ್ ವಾರಂಟ್ ಸೋರಿಕೆ’ ತನಿಖೆಗೆ ಸಿಬಿಐ ನಿರ್ಧಾರ?

Update: 2018-05-31 19:46 IST

ಬೆಂಗಳೂರು, ಮೇ 31: ಸಿಬಿಐ ಕೋರ್ಟ್‌ನಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಅವರ ಆಪ್ತ 11 ಮಂದಿ ವಿರುದ್ಧ ಸರ್ಚ್ ವಾರಂಟ್ ಜಾರಿಯಾಗಿರುವ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಬಿಐ ಅಧಿಕಾರಿಗಳು ಸರ್ಚ್ ವಾರಂಟ್ ಪಡೆದಿರುವ ಕುರಿತು ನಿನ್ನೆಯೆ ಮಾಹಿತಿ ಸೋರಿಕೆಯಾಗಿದೆ. ನ್ಯಾಯಾಲಯವು ಲಕೋಟೆ ಮೂಲಕ ಸರ್ಚ್ ವಾರಂಟ್ ಜಾರಿ ಮಾಡಿದ್ದರೂ, ಈ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳು ದಾಳಿ ನಡೆಸುವ ಮುನ್ನ ಸಂಸದ ಡಿ.ಕೆ.ಸುರೇಶ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದರು. ಡಿ.ಕೆ.ಸಹೋದರರಿಗೆ ಸಿಬಿಐ ದಾಳಿ ಕುರಿತು ಮಾಹಿತಿ ಹೇಗೆ ಸಿಕ್ಕಿತು ಎಂಬುದರ ಕುರಿತು ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News