ಮಹಾಧರ್ಮಾಧ್ಯಕ್ಷರ ನೇಮಕ ಖಂಡಿಸಿ ಕೆಥೋಲಿಕ್ ಕನ್ನಡ ಸಂಘದಿಂದ ಕರಾಳ ದಿನಾಚರಣೆ ಆಚರಣೆ

Update: 2018-05-31 16:27 GMT

ಬೆಂಗಳೂರು, ಮೇ 31: ಬೆಂಗಳೂರು ಮಹಾಧರ್ಮಾಧ್ಯಕ್ಷರಾಗಿ ಡಾ.ಪೀಟರ್ ಮೊಚಾಡೊ ನೇಮಕವನ್ನು ವಿರೋಧಿಸಿ ಅಖಿಲ ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಸದಸ್ಯರು ನಗರದ ಮೌರ್ಯ ವೃತ್ತದ ಬಳಿ ಕರಾಳ ದಿನಾಚರಣೆ ಆಚರಿಸಿದರು.

ರಾಜ್ಯದಲ್ಲಿ ಈಗಾಗಲೆ 7ಮಂದಿ ಕೊಂಕಣಿ ಧರ್ಮಾಧ್ಯಕ್ಷರಿದ್ದಾರೆ. ಆದರೆ, ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ಅಂಥೋಣಿರಾಜುರನ್ನು ಹೊರತು ಪಡಿಸಿದರೆ ಕನ್ನಡರಿಗರು ಒಬ್ಬರೂ ಇಲ್ಲ. ಹೀಗಾಗಿ ಹಲವಾರು ವರ್ಷಗಳಿಂದ ಬೆಂಗಳೂರು ಧರ್ಮಾಧ್ಯಕ್ಷರನ್ನಾಗಿ ಕನ್ನಡಿಗರನ್ನು ನೇಮಿಸಬೇಕೆಂದು ಹಲವು ಬಾರಿ ಮನವಿ ಮಾಡಲಾಗಿದೆ. ಆದರು ನಮ್ಮ ಮನವಿಯನ್ನು ಮೇಲಿನ ಧರ್ಮಾಧ್ಯಕ್ಷರು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ಕರ್ನಾಟಕ ಕೆಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಕಾರ್ಯದರ್ಶಿ ರಫಾಯಲ್ ರಾಜು ವಿಷಾದಿಸಿದರು.

ದೇಶಾದ್ಯಂತ 300ಮಂದಿ ಧರ್ಮಾಧ್ಯಕ್ಷರಾಗಲು ಅರ್ಹತೆ ಹೊಂದಿರುವವರು ಇದ್ದಾರೆ. ಆದರೆ, ನಾನಾ ಕಾರಣಗಳಿಂದ ಧರ್ಮಾಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಲೇ ಬರುತ್ತಿದೆ. ಹೀಗಾಗಿ ನಮಗೆ ನ್ಯಾಯ ಸಿಗುವವರೆಗೆ ಹೋರಾಟವನ್ನು ಮುಂದುವರೆಸುವುದಾಗಿ ಅವರು ತಿಳಿಸಿದರು.

ಹಕ್ಕೊತ್ತಾಯಗಳು
-ಬೆಂಗಳೂರಿನ ಧರ್ಮ ಗುರುಗಳಾದ ಫಾ.ವಿಲಿಯಂ ಪ್ಯಾಟ್ರಿಕ್, ಫಾ.ಇಲಿಯಾಸ್, ಫಾ.ಎಡ್ವರ್ಡ್ ವಿರುದ್ಧ ಇರುವ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಬೇಕು.
-ಬೆಂಗಳೂರು ಧರ್ಮ ಕ್ಷೇತ್ರದಲ್ಲಿ ಆಡಳಿತ ಮತ್ತು ಪೂಜಾ ವಿಧಿಗಳಲ್ಲಿ ಕನ್ನಡವೆ ಸಾರ್ವಭೌಮ ಭಾಷೆ ಎಂದು ಘೋಷಿಸಬೇಕು.
-ಹಿಂದಿನ ಧರ್ಮಾಧ್ಯಕ್ಷರು ಮಾರಾಟ, ವಿಲೇವಾರಿ ಮಾಡಿರುವ ಚರ್ಚಿನ ಆಸ್ತಿಗಳನ್ನು ವಾಪಸ್ ಪಡೆಯಬೇಕು.
-ಬೆಂಗಳೂರು ಧರ್ಮ ಕ್ಷೇತ್ರಕ್ಕೆ ಪ್ರಾದೇಶಿಕ ಗುರುಮಠ ಸ್ಥಾಪನೆ ಮಾಡಿ ಸ್ಥಳೀಯ ಕ್ರೈಸ್ತರ ಮಕ್ಕಳಿಗೆ ಅವಕಾಶ ಕಲ್ಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News