ಬೋಧ್ ಗಯಾ ಸರಣಿ ಸ್ಫೋಟ ಪ್ರಕರಣ: ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2018-06-01 07:29 GMT

ಹೊಸದಿಲ್ಲಿ, ಜೂ.1: ಬೋಧ್ ಗಯಾ ಸರಣಿ ಬಾಂಬು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಐವರು ತಪ್ಪಿತಸ್ಥರಿಗೆ ಪಾಟ್ನಾದ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.

ಎನ್‌ಐಎ ನ್ಯಾಯಾಧೀಶ ಮನೋಜ್ ಕುಮಾರ್ ಸಿನ್ಹಾ ಮೇ 25 ರಂದು ಇಮ್ತಿಯಾಝ್ ಅನ್ಸಾರಿ, ಹೈದರ್ ಅಲಿ, ಮುಜೀಬುಲ್ಲಾ, ಉಮೈರ್ ಸಿದ್ದೀಕಿ ಹಾಗೂ ಅಝರುದ್ದೀನ್ ಕುರೇಶಿ ವಿವಿಧ ಐಪಿಸಿ ಸೆಕ್ಷನ್‌ಗಳು, ಕಾನೂನು ಬಾಹಿರ ಚಟುವಟಿಕೆ(ತಡೆಗಟ್ಟುವಿಕೆ)ಕಾಯ್ದೆ ಹಾಗೂ ಸ್ಫೋಟಕ ಕಾಯ್ದೆಯಡಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದರು. ಆರನೇ ಆರೋಪಿ ತೌಫೀಕ್ ಅಹ್ಮದ್ ಬಾಲಾಪರಾಧಿಯಾಗಿದ್ದು ಅಹ್ಮದ್‌ಗೆ ಈ ಹಿಂದೆಯೇ ಮೂರು ವರ್ಷಗಳ ಕಾಲ ರಿಮಾಂಡ್ ಹೋಮ್‌ನಲ್ಲಿರುವ ಶಿಕ್ಷೆ ನೀಡಲಾಗಿದೆ.

ಬೌದ್ದರ ಯಾತ್ರಾಸ್ಥಳ ಬೋಧ್ ಗಯಾದಲ್ಲಿ 2013ರ ಜುಲೈ 7 ರಂದು ಸರಣಿ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಬೌದ್ಧ ಸನ್ಯಾಸಿಗಳು ಸಹಿತ ಹಲವರು ಗಾಯಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News