ಸಿಎಂ ಆಪ್ತ ಕಾರ್ಯದರ್ಶಿ ನೇಮಕ
Update: 2018-06-01 21:19 IST
ಬೆಂಗಳೂರು, ಜೂ.1: ಹಿರಿಯ ಕೆಎಎಸ್ ಅಧಿಕಾರಿ ಜಿ.ಪ್ರಭು ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪಿ.ವಿ.ಶ್ರೀನಿವಾಸನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.