×
Ad

ಎಜಿ ಆಗಿ ಉದಯ್ ಹೊಳ್ಳ ಅಧಿಕಾರ ಸ್ವೀಕಾರ

Update: 2018-06-01 21:43 IST

ಬೆಂಗಳೂರು, ಜೂ.1: ರಾಜ್ಯ ಸರಕಾರದ ನೂತನ ಅಡ್ವೋಕೇಟ್ ಜನರಲ್ ಆಗಿ ಹಿರಿಯ ವಕೀಲ ಉದಯ್ ಹೊಳ್ಳ ಅಧಿಕಾರ ಸ್ವೀಕರಿಸಿದ್ದಾರೆ.

ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲೂ ಎಜಿಯಾಗಿದ್ದ ಉದಯ್ ಹೊಳ್ಳ ಅವರನ್ನು ನೂತನ ಅಡ್ವೊಕೇಟ್ ಜನರಲ್ ಆಗಿ ರಾಜ್ಯ ಸರಕಾರ ನೇಮಿಸಿ ಆದೇಶ ಹೊರಡಿಸಿತ್ತು.

ಇದೀಗ ಮತ್ತೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಎಜಿಯಾಗಿ ಉದಯ್ ಹೊಳ್ಳ ಅವರು ಹೈಕೋರ್ಟ್‌ನಲ್ಲಿರುವ ಎಜಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News