×
Ad

ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆಯ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

Update: 2018-06-02 21:18 IST

ಬೆಂಗಳೂರು, ಜೂ.2: ನಗರದ ಚರ್ಚ್ ಶೀಟ್ ರಸ್ತೆಯ ನಿರ್ವಹಣೆಯನ್ನು ಖಾಸಗಿಯವರ ಉಸ್ತುವಾರಿಗೆ ವಹಿಸಲು ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ವಿರೋಧಿಸಿ ಫೋರಂ ಫಾರ್ ಅರ್ಬನ್ ಗವರ್ನೆನ್ಸ್ ಅಂಡ್ ಕಾಮನ್ಸ್ ಸಂಸ್ಥೆ ಪ್ರತಿಭಟನೆ ನಡೆಸಿತು.

ಚರ್ಚ್ ಸ್ಟ್ರೀಟ್ ರಸ್ತೆ ರಾಜ್ಯ ಸರಕಾರ ಟೆಂಡರ್ ಶ್ಯೂರ್ ಅಡಿಯಲ್ಲಿ 715 ಮೀಟರ್ ರಸ್ತೆಗೆ 15 ಕೋಟಿ ರೂ. ವೆಚ್ಚ ಮಾಡಿ ಕಾಮಗಾರಿ ಮಾಡಿದೆ. ಈಗ ಆ ರಸ್ತೆಯ ನಿರ್ವಹಣೆಗೆ ಖಾಸಗಿ ಸಂಸ್ಥೆಗೆ ನೀಡಲು ಮುಂದಾಗಿರುವುದು ಒಳ್ಳೆಯ ಲಕ್ಷಣವಲ್ಲವೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಮೇಯರ್ ಸಂಪತ್‌ರಾಜ್‌ರನ್ನು ತರಾಟೆಗೆ ತೆಗೆದುಕೊಂಡ ಸಂಸ್ಥೆಯ ಸದಸ್ಯರು, ನಗರದ ಯಾವುದೆ ರಸ್ತೆಯನ್ನು ಖಾಸಗಿ ಕರಣ ಮಾಡಬಾರದು. ಬಿಬಿಎಂಪಿ ವತಿಯಿಂದ ರಸ್ತೆಗಳು ನಿರ್ವಹಣೆಯಾಗಲಿ ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News