ಬೆಂಗಳೂರು: ಸಂತ ಜೋಸೆಫ್ ಕಾಲೇಜಿಗೆ ವಿವಿ ಮಾನ್ಯತೆ
Update: 2018-06-02 21:47 IST
ಬೆಂಗಳೂರು, ಜೂ. 2: ಸಂತ ಜೋಸೆರ ಕಾಲೇಜು(ಸ್ವಾಯತ್ತ)ಗೆ ರಾಷ್ಟ್ರೀಯ ಉಚ್ಛತರ್ ಶಿಕ್ಷ ಅಭಿಯಾನ(ರೂಸ)ದ ಎರಡನೇ ಹಂತದ ಯೋಜನೆಯಲ್ಲಿ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಮುಖ್ಯಸ್ಥ ಫಾ.ವಿಕ್ಟರ್ ರೋಬೊ, ಸ್ವಾಯತ್ತ ಕಾಲೇಜುಗಳಿಗೆ ವಿಶ್ವವಿದ್ಯಾಲಯದ ದರ್ಜೆಗೆ ಮಾನ್ಯತೆ ನೀಡುವ ಅವಕಾಶವಿರುವುದರಿಂದ ರೂಸ 2ನೇ ಹಂತದ ಯೋಜನೆಯಡಿಯಲ್ಲಿ ಮಾನ್ಯತೆ ಕೋರಿ ಎಪ್ರಿಲ್‌ನಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿತ್ತು ಎಂದರು.
ಇಡೀ ದೇಶದಲ್ಲಿ 3 ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ, ವಿಶ್ವವಿದ್ಯಾಲಯದ ಮಾನ್ಯತೆ ನೀಡಿರುವ ಪೈಕಿ ಸಂತ ಜೋಸೆರ ಕಾಲೇಜು ಒಂದಾಗಿದೆ. ನಮ್ಮ ಕಾಲೇಜಿನ ಶಿಕ್ಷಣದ ಗುಣಮಟ್ಟ ಹಾಗೂ ಆಡಳಿತಾತ್ಮಕದ ಗುಣಮಟ್ಟದಿಂದ ರೂಸ ಯೋಜನೆಯಲ್ಲಿ ಮಾನ್ಯತೆ ದೊರೆತ್ತಿದೆ ಎಂದು ಹೇಳಿದರು.