ಆರೋಗ್ಯ ಸೇವೆಗಳು ‘ಆರೋಗ್ಯ ಕರ್ನಾಟಕ’ದಲ್ಲಿ ವಿಲೀನ
Update: 2018-06-03 20:48 IST
ಬೆಂಗಳೂರು, ಜೂ.3: ಪಡಿತರ ಚೀಟಿಯ ಮೂಲಕವೆ ಆರೋಗ್ಯ ಕರ್ನಾಟಕ ಯೋಜನೆಯ ಎಲ್ಲ ಸೌಲಭ್ಯಗಳನ್ನು ರೋಗಿಗಳು ಪಡೆದುಕೊಳ್ಳಬಹುದಾಗಿದೆ.
ಯಶಸ್ವಿನಿ, ವಾಜಪೇಯಿ, ಆರೋಗ್ಯ ಶ್ರೀ ಯೋಜನೆಗಳು ‘ಆರೋಗ್ಯ ಕರ್ನಾಟಕ’ ದಲ್ಲಿಯೆ ವಿಲೀನವಾಗಲಿದೆ. ರಾಷ್ಟ್ರೀಯ ಸ್ವಾಸ್ಥ ವಿಮಾ ಯೋಜನೆ ಆಗಸ್ಟ್ 2018ರವರೆಗೆ ಮುಂದುವರೆಯಲಿದೆ. ನಂತರ ಈ ಯೋಜನೆಯು ಅದರಲ್ಲಿ ವಿಲೀನವಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.