ನಾಗೇಶ್ ರಾವ್

Update: 2018-06-03 17:20 GMT

ಮೂಡುಬಿದಿರೆ, ಜೂ. 3: ನಿವೃತ್ತ ಶಿಕ್ಷಕ, ಹವ್ಯಾಸಿ ಯಕ್ಷಗಾನ ಕಲಾವಿದ ಕಲ್ಲಬೆಟ್ಟ ಗ್ರಾಮದ ಪಾಲ್ದಗುರಿ ನಿವಾಸಿ ಜೆ. ನಾಗೇಶ್ ರಾವ್ (92) ಜೂ. 3ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬೆಳುವಾಯಿ, ಜ್ಯೋತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಕಲ್ಲಬೆಟ್ಟು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ ಅವರು ಇಂಗ್ಲಿಷ್, ಹಿಂದೀ ಭಾಷೆ ಬೋಧಿಸುತ್ತಿದ್ದರು. ಯಕ್ಷಗಾನ ಆಟ, ಕೂಟಗಳಲ್ಲಿ ಹವ್ಯಾಸಿ ಕಲಾವಿದರಾಗಿ ಪಾಲ್ಗೊಳ್ಳುತ್ತಿದ್ದರು. ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನಾ ಸಂದರ್ಭ ಅವರನ್ನು ಸಮ್ಮಾನಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ