ನಿಪಾಹ್ ಭೀತಿ: ಕೇರಳದ ಉತ್ಪನ್ನಗಳ ಆಮದಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ

Update: 2018-06-05 12:47 GMT

ರಿಯಾದ್, ಜೂ.5: ನಿಪಾಹ್ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು ಕೇರಳದಿಂದ ಹಣ್ಣು, ತರಕಾರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದೆ.

ಕೇರಳದಿಂದ ಆಮದು ಮಾಡಿಕೊಳ್ಳುವುದನ್ನು ಮೇ 29ರಿಂದಲೇ ಯುಎಇ ನಿಷೇಧಿಸಿತ್ತು. 100 ಟನ್ ಗಳಷ್ಟು ಹಣ್ಣುಗಳು, ತರಕಾರಿಗಳು ಹಾಗು ಕೇರಳದಿಂದ ಆಮದು ಮಾಡಿಕೊಳ್ಳಲಾದ  ಇತರ ಉತ್ಪನ್ನಗಳು ಪ್ರವೇಶಿಸಬಾರದು ಎಂದು ಯುಎಇ ಅಧಿಕಾರಿಗಳು ಘೋಷಿಸಿದ್ದರು.

ನಿಪಾಹ್ ವೈರಸ್ ಗೆ ಈಗಾಗಲೇ ಕೇರಳದಲ್ಲಿ 16 ಮಂದಿ ಬಲಿಯಾಗಿದ್ದಾರೆ. ಇನ್ನಿಬ್ಬರು ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 2000 ಮಂದಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News