ಉತ್ತರ ಭಾರತದಲ್ಲಿ ಸಿಡಿಲು ಬಡಿದು 18 ಮಂದಿ ಸಾವು
Update: 2018-06-08 23:12 IST
ಹೊಸದಿಲ್ಲಿ/ಪಾಟ್ನಾ, ಜೂ.8: ಬಿಹಾರ, ಉತ್ತರಪ್ರಪದೇಶ ಹಾಗೂ ಒರಿಸ್ಸಾದ ವಿವಿಧ ಭಾಗಗಳಲ್ಲಿ ಶುಕ್ರವಾರ ಸಿಡಿಲು ಬಡಿದು ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆ.
ಸಹರ್ಸಾ ಜಿಲ್ಲೆಯಲ್ಲಿ 6 ಮಂದಿ, ದರ್ಭಾಂಗ್‌ನಲ್ಲಿ ನಾಲ್ಕು ಮಂದಿ ಹಾಗೂ ಮಧೇಪುರ ಜಿಲ್ಲೆಯಲ್ಲಿ ಓರ್ವ ಮೃತಪಟ್ಟಿದ್ದಾರೆ ಎಂದು ಬಿಹಾರ ಹಾಜ್ಯ ಪ್ರಕೃತಿ ವಿಕೋಪ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಪ್ರದೇಶದ ಜಾನ್‌ಪುರ ಹಾಗೂ ರಾಯ್‌ಬರೇಲಿ ಜಿಲ್ಲೆಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು 5 ಮಂದಿ ಮೃತಪಟ್ಟಿದ್ದಾರೆ. ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.