ಮಕ್ಕಾ: ಮಸ್ಜಿದುಲ್ ಹರಾಮ್ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

Update: 2018-06-10 09:53 GMT

ರಿಯಾದ್,ಜೂ.10: ಮಕ್ಕಾದ ವಿಶ್ವವಿಖ್ಯಾತ ಮಸ್ಜಿದುಲ್ ಹರಾಮ್ ನಲ್ಲಿ ವ್ಯಕ್ತಿಯೊಬ್ಬ ಮೇಲಿನ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

“ವಿದೇಶಿ ಪ್ರಜೆಯೊಬ್ಬ ಮಸ್ಜಿದುಲ್ ಹರಾಮ್ ನ ಮೇಲಿನ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದು, ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. “ಆತ್ಮಹತ್ಯೆಗೈದ ವ್ಯಕ್ತಿ ಯಾರು?, ಆತನ ಈ ಕೃತ್ಯಕ್ಕೆ ಕಾರಣವೇನು ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News