ಬೆಂಗಳೂರು: ವೃದ್ಧನ ಬೆದರಿಸಿ ಕಳವು

Update: 2018-06-12 13:17 GMT

ಬೆಂಗಳೂರು, ಜೂ.12: ವೃದ್ಧರೊಬ್ಬರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ನಗದು ಕಳವು ಮಾಡಿರುವ ಘಟನೆ ಇಲ್ಲಿನ ಚಿಕ್ಕಪೇಟೆ ಬಳಿ ನಡೆದಿದೆ.

ಸೋಮವಾರ ಬೆಳಗ್ಗೆ 10 ಗಂಟೆಗೆ ತಮಿಳುನಾಡು ಮೂಲದ ವೃದ್ಧರೊಬ್ಬರು ಇಲ್ಲಿನ ಚಿಕ್ಕಪೇಟೆಯ ಮೋಹನ್ ಕಾಂಪ್ಲೆಕ್ಸ್‌ಗೆ ಬಂದಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ಇಬ್ಬರು ವೃದ್ಧರನ್ನು ಹಿಡಿದುಕೊಂಡು ಸುಮಾರು 15 ಸಾವಿರ ರೂ.ನಗದು ತೆಗೆದುಕೊಂಡು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೈಯಲ್ಲಿ ಚಾಕು ಹಿಡಿದಿದ್ದರಿಂದ ಭಯಬೀತರಾದ ವ್ಯಕ್ತಿ ಪ್ರತಿರೋಧ ತೋರಲು ಮುಂದಾಗಿಲ್ಲ. ಸಂಬಂಧ ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News