×
Ad

ಡಿಪ್ಲೊಮ ಪತ್ರಿಕೋದ್ಯಮ ಕೋರ್ಸ್‌ಗೆ ಅರ್ಜಿ ಆಹ್ವಾನ

Update: 2018-06-12 21:32 IST

ಬೆಂಗಳೂರು, ಜೂ.12: ಜಯನಗರ ಮೂರನೆ ಹಂತದಲ್ಲಿರುವ ಬದುಕು ಕಮ್ಯುನಿಟಿ ಕಾಲೇಜು ವತಿಯಿಂದ ಒಂದು ವರ್ಷದ ಕ್ರಿಯಾಶೀಲ ಮಾಧ್ಯಮದ ಡಿಪ್ಲೊಮ ಪತ್ರಿಕೋದ್ಯಮ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ.

ಮುದ್ರಣ, ವಿದ್ಯುನ್ಮಾನ ಹಾಗೂ ಆನ್‌ಲೈನ್ ವಿಷಯವನ್ನು ಕೋರ್ಸ್ ಒಳಗೊಂಡಿರುತ್ತದೆ. ಕೋರ್ಸ್‌ನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅನುಭವವಿರುವ ಶಿಕ್ಷಕರು, ಪತ್ರಕರ್ತರು ಪಾಠ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯ, ಪ್ರದೇಶಗಳ 25 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಮಾಧ್ಯಮಗಳಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳವರು, ಅವಕಾಶ ವಂಚಿತರು ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆರ್ಥಿಕ, ಸಾಮಾಜಿಕ ಹಿನ್ನೆಲೆಗೆ ಅನುಗುಣವಾಗಿ ತರಬೇತಿ ಶುಲ್ಕ, ಸೂಕ್ತ ಅಭ್ಯರ್ಥಿಗಳಿಗೆ ಸ್ಕಾಲರ್‌ಶಿಪ್, ಫೆಲೋಶಿಪ್‌ಗೆ ಅವಕಾಶವಿದೆ. ಅಲ್ಲದೆ, ಕಲಿಕಾ ಸಂದರ್ಭದಲ್ಲಿ ಅಗತ್ಯವಿರುವವರಿಗೆ ವಸತಿ ಸೌಲಭ್ಯ ನೀಡಲಾಗುತ್ತದೆ.

ಒಂದು ವರ್ಷ ನಡೆಯಲಿರುವ ಕೋರ್ಸ್‌ನಲ್ಲಿ ಮಾಧ್ಯಮ ಅಧ್ಯಯನ, ಸಾಮಾಜಿಕ ವಿಜ್ಞಾನ, ಕಾನೂನು, ಇತಿಹಾಸ, ಸಾಹಿತ್ಯ ಅಧ್ಯಯನವುಳ್ಳ ಪಠ್ಯಕ್ರಮವಿರುತ್ತದೆ. ವೆಬ್‌ಡಿಸೈನ್ ಮತ್ತು ಡಿಜಿಟಲ್ ಮಾಧ್ಯಮ ಬಳಕೆ ಹಾಗೂ ಕಲಿಕೆಯಿರುತ್ತದೆ. ಇಂಗ್ಲಿಷ್ ಭಾಷೆ ಕಲಿಕೆ, ಭಾಷಾಂತರ, ವರದಿಗಾರಿಕೆ, ಬರವಣಿಗೆ ಮುಂತಾದ ಕೌಶಲ್ಯ ಕಲಿಕೆ, ತಾತ್ವಿಕ ವಿಚಾರಗಳ ಕಲಿಕೆ, ಮಾಧ್ಯಮ ಕೌಶಲ್ಯಗಳ ಅಭ್ಯಾಸ, ಕ್ಷೇತ್ರಾಧ್ಯಯನ, ಪತ್ರಿಕಾಲಯ, ದೃಶ್ಯ, ಶ್ರವಣ ಮಾಧ್ಯಮ ಕೇಂದ್ರಗಳಿಗೆ ಭೇಟಿ ಸೇರಿದಂತೆ ವಿವಿಧ ಹಂತದಲ್ಲಿ ಶಿಕ್ಷಣ ನೀಡಲಾಗುತ್ತದೆ.

ಕ್ರಿಯಾಶೀಲ ಮಾಧ್ಯಮ ಕೋರ್ಸ್ ಆಗಸ್ಟ್‌ನಿಂದ ಆರಂಭವಾಗಲಿದ್ದು, ಜುಲೈ ತಿಂಗಳಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 21 ರಿಂದ 35 ವರ್ಷದೊಳಗಿನ, ಪದವಿಪೂರ್ಣಗೊಳಿಸಿರುವ ಯುವಕ- ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ, ಪದವಿ ಅನುತ್ತೀರ್ಣರಾದವರೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಜು.10 ಕೊನೆ ದಿನಾಂಕವಾಗಿದೆ. ಅನಂತರ ರಾಜ್ಯದ ವಿವಿಧ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ಯಾವುದೇ ಶುಲ್ಕವಿರುವುದಿಲ್ಲ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ 78997 69899, 997208941 ಸಂಖ್ಯೆಗಳನ್ನು ಸಂಪರ್ಕ ಮಾಡಬಹುದು ಅಥವಾ ಬದುಕು ಕಮ್ಯುನಿಟಿ ಕಾಲೇಜು, ನಂ. 136/7, 2 ನೆ ಕ್ರಾಸ್, ಎಲಿಫ್ಯಾಂಟ್ ರಾಕ್ ರೋಡ್, ಸೌತ್ ಎಂಡ್ ವೃತ್ತ, 3 ನೆ ಬ್ಲಾಕ್, ಜಯನಗರ, ಬೆಂಗಳೂರು ಇಲ್ಲಿಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News