ಸವೀಟಿ ಬೂರಾಗೆ ಬಂಗಾರ

Update: 2018-06-12 18:35 GMT

ಹೊಸದಿಲ್ಲಿ, ಜೂ.12: ಭಾರತದ ಬಾಕ್ಸರ್ ಸವೀಟಿ ಬೂರಾ ರಶ್ಯದಲ್ಲಿ ಮಂಗಳವಾರ ನಡೆದ ಉಮಾಖನೊವ್ ಸ್ಮಾರಕ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಮಿಡ್ಲ್‌ವೇಟ್(75 ಕೆಜಿ) ವಿಭಾಗದಲ್ಲಿ ರಶ್ಯದ ಅನ್ನಾ ಅಫಿನೊಗೆನೊವಾರನ್ನು ಮಣಿಸಿದ ಬೂರಾ ಮೊದಲ ಸ್ಥಾನ ಪಡೆದರು. ಇದಕ್ಕೆ ಮೊದಲು ಮಾಜಿ ಯೂತ್ ಚಾಂಪಿಯನ್ ಶಶಿ ಚೋಪ್ರಾ(57ಕೆಜಿ), ಮಾಜಿ ಕಾಮನ್‌ವೆಲ್ತ್ ಗೇಮ್ಸ್‌ನ ಕಂಚು ಪದಕ ವಿಜೇತ ಪಿಂಕಿ ಜಾಂಗ್ರಾ(51ಕೆಜಿ) ಹಾಗೂ ಪವಿತ್ರಾ(60ಕೆಜಿ) ಸೆಮಿಫೈನಲ್ ಪಂದ್ಯವನ್ನು ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

 ಪುರುಷರ ವಿಭಾಗದಲ್ಲಿ ಗೌರವ್ ಬಿಧುರಿ(56ಕೆಜಿ)ಫೈನಲ್‌ನಲ್ಲಿ ಎಡವುವ ಮೂಲಕ ಎರಡನೇ ಸ್ಥಾನ ಪಡೆದರು.ಬ್ರಿಜೇಶ್ ಯಾದವ್(81ಕೆಜಿ) ಹಾಗೂ ವೀರೇಂದರ್ ಕುಮಾರ್(91ಕೆಜಿ) ಫೈನಲ್‌ಗೆ ತಲುಪಿದ್ದಾರೆ.

 ಯಾದವ್ ಫೈನಲ್‌ನಲ್ಲಿ ರಶ್ಯದ ಮುರಾಡ್ ರಬಾಡನೊವ್ ಹಾಗೂ ಕುಮಾರ್ ಸ್ವೀಡನ್‌ನ ಅಲೆಕ್ಸಾಂಡರ್ ವಾಲ್‌ಬಲೆ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News