ನಬಾರ್ಡ್ ಪ್ರಧಾನ ವ್ಯವಸ್ಥಾಪಕರಾಗಿ ಪಿವಿಎಸ್ ಸೂರ್ಯಕುಮಾರ್ ನೇಮಕ

Update: 2018-06-14 16:57 GMT

ಬೆಂಗಳೂರು, ಜೂ. 14: ‘ನಬಾರ್ಡ್’ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಪಿವಿಎಸ್ ಸೂರ್ಯಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಹೊಸದಿಲ್ಲಿಯ ಇಂಡಿಯನ್ ಅಗ್ರಿಕಲ್ಚರ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೂರ್ಯಕುಮಾರ್, ಕಾಮನ್‌ವೆಲ್ತ್ ಸ್ಕಾಲರ್ ಆಗಿದ್ದಾರೆ.

ಪ್ರತಿಷ್ಠಿತ ಹುದ್ದೆ ಅಲಂಕರಿಸುವ ಮುನ್ನ ಸೂರ್ಯಕುಮಾರ್, ನಬಾರ್ಡ್‌ನ ಹಲವು ವಿಭಾಗದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದು, ದಿಲ್ಲಿಯ ನಬಾರ್ಡ್ ಕಚೇರಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮುಂಬೈನಲ್ಲಿರುವ ನಬಾರ್ಡ್ ಮುಖ್ಯ ಕಚೇರಿಯಲ್ಲಿ ವ್ಯವಹಾರ ಅಭಿವೃದ್ಧಿ ವಿಭಾಗದ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನಬಾರ್ಡ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News