ಬೆಂಗಳೂರು: ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಮುಂಭಡ್ತಿ
ಬೆಂಗಳೂರು, ಜೂ. 15: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರುಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ 28,100 ರೂ. ನಿಂದ 50,100 ರೂ.ಗಳಿಗೆ ವೇತನ ಶ್ರೇಣಿ ಹೆಚ್ಚಿಸಿ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಭಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಮುಂಭಡ್ತಿ: ಟಿ.ಸಿ.ಮಂಜುನಾಥ ಬಾಬು-ಹಿರಿಯ ಸಹಾಯಕ ನಿರ್ದೇಶಕರು ಚಿಕ್ಕಮಗಳೂರು, ಶಫೀ ಸಾದುದ್ದೀನ್-ಹಿರಿಯ ಸಹಾಯಕ ನಿರ್ದೇಶಕರು ಶಿವಮೊಗ್ಗ, ವಿನೋದ್ ಚಂದ್ರ-ಹಿರಿಯ ಸಹಾಯಕ ನಿರ್ದೇಶಕರು ಹಾಸನ, ರೂಪ ಸಿ.-ಹಿರಿಯ ಸಹಾಯಕ ನಿರ್ದೇಶಕರು ಹುಬ್ಬಳ್ಳಿ, ರೋಹಿಣಿ ಕೆ.-ಹಿರಿಯ ಸಹಾಯಕ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲೆ. ಶ್ರೀನಿವಾಸ್-ಹಿರಿಯ ಸಹಾಯಕ ನಿರ್ದೇಶಕರು ಕೇಂದ್ರ ಕುಡಿಯುವ ನೀರು ಮತ್ತು ಒಳಚರಂಡಿ ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಕೆ, ಕೆ.ಪಿ.ಪುಟ್ಟಸ್ವಾಮಯ್ಯ-ಹಿರಿಯ ಸಹಾಯಕ ನಿರ್ದೇಶಕರು ಕೇಂದ್ರ ಕಚೇರಿಯಲ್ಲಿ ಖಾಲಿ ಇರುವ ಕ್ಷೇತ್ರ ಪ್ರಚಾರಾಧಿಕಾರಿ ಹುದ್ದೆ, ಮಮತಾ ಎಂ.ಆರ್.- ವ್ಯವಸ್ಥಾಕಪ ನಿರ್ದೇಶಕರು ಕಂಠೀರವ ಸ್ಟುಡಿಯೋ ನಿಗಮ ನಿಯಮಿತ.
ಜಂಟಿ ನಿರ್ದೇಶಕರು: ಮೂವರು ಉಪ ನಿರ್ದೇಶಕರಾಗಿದ್ದ ಎನ್.ಭಂಗೇಶ್, ಎ.ಆರ್.ಪ್ರಕಾಶ್ ಹಾಗೂ ಎಚ್.ಬಿ.ದಿನೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 40,050 ರೂ.ಗಳಿಂದ 56,550 ರೂ.ಗಳ ವೇತನ ಶ್ರೇಣಿಯ ಜಂಟಿ ನಿರ್ದೇಶಕರ ಹುದೆಗೆ ಮುಂಭಡ್ತಿ ನೀಡಲಾಗಿದೆ.